ಮೂಡುಬಿದಿರೆ: 77 ನೇ ಸ್ವಾತಂತ್ರ್ಯದ ಸಂಭ್ರಮದಂಗವಾಗಿ ತಾಲೂಕಿನ ದರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲ್ಲಪುತ್ತಿಗೆ ಕೆಂಪುಲು ಕೆರೆ ದಂಡೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಅಮೃತ ಸರೋವರದಲ್ಲಿ ಪಂಚಾಯತ್ ಅಧ್ಯಕ್ಷೆ ತುಳಸಿ ಮೂಲ್ಯ ಹಾಗೂ ಉಪಾಧ್ಯಕ್ಷರಾದ ಅಶೋಕ್ ಶೆಟ್ಟಿ ಅವರು ಧ್ವಜಾರೋಹಣ ನೆರವೇರಿಸಿದರು.
ಮೇರಿ ಮಾಟಿ ಮೇರಾ ದೇಶ್ ಕಾರ್ಯಕ್ರಮದಡಿ ಶಿಲಾಫಲಕವನ್ನು ಉದ್ಘಾಟಿಸಿ, ಪ್ರತಿಜ್ಞಾ ಸ್ವೀಕಾರ ಮಾಡಲಾಯಿತು. ವಸುಧಾ ವಂದನ್ ಕಾರ್ಯಕ್ರಮದಡಿ 75 ಸಸಿಗಳನ್ನು ನೆಡಲಾಯಿತು. ಅಮೃತ ಸರೋವರದ ಸುತ್ತಲೂ ತ್ರಿವರ್ಣ ಧ್ವಜವನ್ನು ಅಳವಡಿಸಿರುವುದು ಆಕರ್ಷಣೀಯವಾಗಿತ್ತು.
ಗ್ರಾಮ ಪಂಚಾಯತ್ ಸರ್ವ ಸದಸ್ಯರಾದ ಸುಭಾಶ್ಚಂದ್ರ ಚೌಟ, ಮುನಿರಾಜ್ ಹೆಗ್ಡೆ, ಸಂತೋಷ್ ಪೂಜಾರಿ, ದೀಕ್ಷಿತ್, ಪ್ರಸಾದ್,ಶಶಿಕಲಾ,ನಳಿನಿ,ಗಂಗಾ, ಜನಿತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ರಾಥೋಡ್, ಪಂಚಾಯತ್ ಕಾರ್ಯದರ್ಶಿ ಸತ್ಯಭಾಮ, ಐಇಸಿ ಸಂಯೋಜಕಿ ಅನ್ವಯ, ಪಂಚಾಯತ್ ಸಿಬ್ಬಂದಿ ಯೋಗಿಶ್,ನಯನಾ, ಸುಕನ್ಯಾ, ಕೃಷ್ಣಪ್ಪ, ಕುಸುಮಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
0 Comments