ಮೈಸೂರುಮಹಾರಾಜರಾದ ಯದುವೀರ ಕೃಷ್ಣದತ್ತ ಒಡೆಯರ್ ಆಗಸ್ಟ್ 15ರಂದುಎಕ್ಸಲೆಂಟ್ ಶಿಕ್ಷಣ ಸಂಸ್ಥೆಗೆ

ಜಾಹೀರಾತು/Advertisment
ಜಾಹೀರಾತು/Advertisment

 ಆ.15 ರಂದು ಎಕ್ಸಲೆಂಟ್ ಸಂಸ್ಥೆಗೆ ಮೈಸೂರು ಅರಮನೆಯ ರಾಜ ಯದುವೀರ ಕೃಷ್ಣದತ್ತ ಒಡೆಯರ್  ಆಗಮನ



"ರಾಜ ಸಭಾಂಗಣ" ಉದ್ಘಾಟನೆ 

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗೆ ಮೈಸೂರು ಅರಮನೆಯ ಮಹಾರಾಜರಾದ ಯದುವೀರ ಕೃಷ್ಣದತ್ತ ಒಡೆಯರ್ ಅವರು ಆಗಸ್ಟ್ 15 ರಂದು ಆಗಮಿಸಲಿದ್ದಾರೆ ಎಂದು  ಸಂಸ್ಥೆಯ ಅಧ್ಯಕ್ಷ ಯುವ ರಾಜ ಜೈನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.



  ಕಳೆದ 10 ವರ್ಷಗಳಿಂದ ಸಂಸ್ಥೆಯು ಸ್ವಾತಂತ್ರ್ಯ ದಿನಾಚರಣೆಯನ್ನು  ವಿಜೃಂಭ ಣೆಯಿಂದ ಆಚರಿಸಿಕೊಂಡು ಬರುತ್ತಿದ್ದು ಈ ಬಾರಿ ಕೂಡಾ ವಿಶಿಷ್ಟವಾಗಿ ನಡೆಸಲು ಸಿದ್ದತೆ ನಡೆಸಲಾಗಿದ್ದು ಎಂದು ಮಾಹಿತಿ ನೀಡಿದ ಅವರು ಈ ಬಾರಿ  ನೂತ ನವಾಗಿ ನಿರ್ಮಾಣಗೊಂಡಿರುವ "ರಾಜ ಸಭಾಂಗಣ" ವನ್ನು ಮಹಾರಾಜರು ಉದ್ಘಾಟಿಸಲಿದ್ದಾರೆ ನಂತರ  ವಿದ್ಯಾರ್ಥಿ ಗಳೊಂದಿಗೆ ಒಂದು ಗಂಟೆ ಸಂವಾದ ನಡೆಸಲಿದ್ದಾರೆ ಎಂದು ತಿಳಿಸಿದರು.

   ಇದೇ ಸಂದರ್ಭದಲ್ಲಿ 2022-23 ನೇ ಸಾಲಿನಲ್ಲಿ ನಡೆದ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ರ್ಯಾಂಕ್ ಪಡೆದ ಪದವಿಪೂರ್ವ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳನ್ನು ಹಾಗೂ ಜೆ.ಇ.ಇ, ನೀಟ್, ಐ.ಐ.ಟಿ ಪರೀಕ್ಷೆಗಳಲ್ಲಿ ಅಭೂತಪೂರ್ವ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಿದ್ದೇವೆ ಎಂದು ಹೇ ಳಿದರು.

    ಮಧ್ಯಾಹ್ನ 12 ಗಂಟೆಗೆ ಮಹಾರಾಜರು ಆಗಮಿಸಲಿದ್ದು ಸಾಂಪ್ರದಾಯಕವಾದ ಗೌರವ ಮೆರವಣಿಗೆಯ ಮೂಲಕ ಸಂಸ್ಥೆಗೆ ಅವರನ್ನು ಸ್ವಾಗತಿಸಲಿದ್ದೇವೆ ಎಂದು ಹೇಳಿದರು.

   ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ್, ಉಪನ್ಯಾಸಕ ವಾದಿರಾಜ ಕಲ್ಲೂರಾಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿ ದ್ದರು.

Post a Comment

0 Comments