ಎಂ.ಕೆ.ಶೆಟ್ಟಿ ಸೆಂಟ್ರಲ್ ಸ್ಕೂಲ್ ನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ
ಮೂಡುಬಿದಿರೆ: ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಶ್ರೇಷ್ಠನಾಯಕರಾಗಬಹುದುಮೂಡಬಿದಿರೆಯ ಖ್ಯಾತ ನ್ಯಾಯವಾದಿ ಶ್ವೇತಾ ಜೈನ್ ಹೇಳಿದರು .
ಅವರು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆಸಲಾಗುತ್ತಿರುವ ಎಂ. ಕೆ.ಶೆಟ್ಟಿ ಸೆಂಟ್ರಲ್ ಶಾಲೆಯ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ನಾಯಕತ್ವಕ್ಕೆ ಬಡತನ, ದೇಹ ರಚನೆ, ಬಣ್ಣ, ಆಕಾರಗಳು ಯಾವುದೂ ಅಡ್ಡಿಯಾಗುವುದಿಲ್ಲವೆಂದರು.
.
ಸಂಸ್ಥೆಯ ಅಧ್ಯಕ್ಷೆ ರಶ್ಮಿತಾ ಜೈನ್ ಅವರು ಅಧ್ಯಕ್ಷತೆಯನ್ನು ವಹಿಸಿ ಶೈಕ್ಷಣಿಕ ವರ್ಷದ ವಿವಿಧ ಕ್ಲಬ್‌ಗಳನ್ನುಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಈ ಕ್ಲಬ್‌ಗಳ ಮೂಲಕ ನಡೆಸಲಾಗುವ ಚಟುವಟಿಕೆಗಳು ಪೂರಕವಾಗಲಿ” ಎಂದು ಅವರು ಶುಭ ಹಾರೈಸಿದರು.
10ನೇ ತರಗತಿ ಮಹಮ್ಮದ್ ಅಯಾನ್ ವಿದ್ಯಾರ್ಥಿ ನಾಯಕನಾಗಿ, ಹಾಗೂ 9ನೇ ತರಗತಿಯ ಪೃಥ್ವಿರಾಜ್ ಶೆಟ್ಟಿ ಉಪನಾಯಕನಾಗಿ ಚುನಾಯಿತರಾಗಿದ್ದು ಪ್ರಮಾಣವಚನವನ್ನು ಸ್ವೀಕರಿಸಿದರು.
ಶಾಲಾ ಆಡಳಿತ ನಿರ್ದೇಶಕ ಡಾ| ಸಂಪತ್ ಕುಮಾರ್, ಶಾಲಾ ಪ್ರಾಂಶುಪಾಲೆ ದಿವ್ಯಾ ಎಸ್. ನಾಯಕ್ ಹಾಗೂ ಉಪಪ್ರಾಂಶುಪಾಲೆ ವಿಮಲಾ ಉಪಸ್ಥಿತರಿದ್ದರು.
10ನೇ ತರಗತಿಯ ಮೇಹರುಷ ಸ್ವಾಗತಿಸಿ, ಸುವಿತ್ ಭಂಡಾರಿ ವಂದಿಸಿ, 9ನೇ ತರಗತಿಯ ಕು| ರಶ್ಮಿತಾ ಕಾರ್ಯಕ್ರಮವನ್ನುನಿರೂಪಿಸಿದರು.
0 Comments