ಸ್ಥಗಿತಗೊಂಡಿರುವ ಸರಕಾರಿ ನರ್ಮ್ ಬಸ್ ಗಳ ಸೇವೆಯನ್ನು ಪುನರಾಂಭಿಸಲು ಒತ್ತಾಯಿಸಿ. ಪ್ರತಿಭಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಸ್ಥಗಿತಗೊಂಡಿರುವ  ಸರಕಾರಿ ನರ್ಮ್  ಬಸ್ ಗಳ ಸೇವೆಯನ್ನು   ಪುನರಾಂಭಿಸಲು ಒತ್ತಾಯಿಸಿ ತಾಲೂಕಿನ  ಸಿಐಟಿಯು, ಬೀಡಿ ಕೆಲಸಗಾರರ ಸಂಘ ಮತ್ತು ಜನವಾದಿ ಮಹಿಳಾ ಸಂಘಟನೆಯ ಜಂಟಿ  ಆಶ್ರಯದಲ್ಲಿ ಸೋಮವಾರ ತಾಲೂಕು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಯಿತು.



ಸಿಐಟಿಯು ನ ರಾಜ್ಯ ಉಪಾಧ್ಯಕ್ಷ ವಸಂತ ಅಚಾರಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ  ಮಹಿಳಾ ಕಾರ್ಮಿಕರು ದಿನನಿತ್ಯ ಖಾಸಗಿ ಬಸ್ಸಿನಲ್ಲಿ ಹೋಗುವಾಗ ಬರುವಾಗ ಟಿಕೇಟ್ ನೀಡಿ ಓಡಾಡುತ್ತಿದ್ದು  ರಾಜ್ಯ ಸರ್ಕಾರದ ಯೋಜನೆಗಳನ್ನು ರಾಜ್ಯದ ಪ್ರಮುಖ ನಗರವಾದ ಮಂಗಳೂರು, ಮೂಡುಬಿದಿರೆ, ಕಾರ್ಕಳ, ನಾರಾವಿ, ಬೆಳ್ತಂಗಡಿ, ಕಿನ್ನಿಗೋಳಿ, ಮುಲ್ಕಿ ಹಾಗೂ ಒಳ ರಸ್ತೆಗಳ ಪ್ರಮುಖ ಭಾಗಗಳಿಗೆ ಸರಕಾರಿ ಬಸ್ಸನ್ನು ನಿಯೋಜಿಸಬೇಕೆಂದು  ಒತ್ತಾಯಿಸಿದರು.

  

ರಾಜ್ಯ ಸರ್ಕಾರ ನೀಡುತ್ತಿರುವ ಉಚಿತ ಯೋಜನೆಗಳನ್ನು ಪ್ರಶ್ನಿಸುವ ಜನರು ಶ್ರೀಮಂತರಿಗೆ ಉಚಿತ ಯೋಜನೆಗಳನ್ನು ನೀಡಿದರೆ ಅದು ಕೈಗಾರೀಕರಣ, ವ್ಯಾಪಾರ ಎಂದು ಹೇಳುವವರು, ಬಡ ಜನರಿಗೆ ಉಚಿತ ಯೋಜನೆಗಳನ್ನು ನೀಡಿದ ಕೂಡಲೇ ಲಂಚ ಎಂದು ಟೀಕಿಸುತ್ತೀರಿ. ಈ ನಿಮ್ಮ  ಯೋಚನೆಗಳನ್ನು ಸರಿಮಾಡಿಕೊಳ್ಳಿ. ನಮ್ಮ ದೇಶದಲ್ಲಿ ಎಲ್ಲಿಯ ತನಕ ಬಡತನ, ಹಸಿವು, ನಿರುದ್ಯೋಗ ಇರುತ್ತದೋ ಅಲ್ಲಿಯವರೆಗೆ ಈ ಸೌಲಭ್ಯ ಜನಸಾಮಾನ್ಯರಿಗೆ ಸಿಗಲು ಸಾದ್ಯವಿಲ್ಲ ಎಂದರು.

  ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಜಯಂತಿ ಶೆಟ್ಟಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ಸ್ವಲ್ಪ ದಿನಗಳಲ್ಲಿಯೇ  ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿರುವುದನ್ನು ಕಂಡು ಬಿಜೆಪಿಯವರು ನಂಜು ಕಾರುತ್ತಿದ್ದಾರೆ. ಬಿಜೆಪಿಗರೇ ನಿಮ್ಮಿಂದ ಸಾಧ್ಯವಾಗುವುದಾದರೆ ಮಹಿಳೆಯರಿಗೆ ಸಹಕಾರ‌ ನೀಡಿ ನಂಜು ಕಾರಬೇಡಿ ಎಂದು ಎಚ್ಚರಿಸಿದರು.

ಜನವಾದಿ ಮಹಿಳಾ ಸಂಘಟನೆಯ ಮೂಡುಬಿದಿರೆಯ ಮಾಜಿ ಅಧ್ಯಕ್ಷೆ ರಮಣಿ ಮಾತನಾಡಿದರು.

 ಸಿಐಟಿಯುನ ಸುಂದರ ಶೆಟ್ಟಿ, ಜನವಾದಿ ಮಹಿಳಾ ಸಂಘಟನೆಯ ಪದಾಧಿಕಾರಿ ಗಿರಿಜಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜನವಾದಿ ಮಹಿಳಾ ಸಂಘಟನೆಯ ಮೂಡುಬಿದಿರೆ ತಾಲೂಕು ಅಧ್ಯಕ್ಷೆ ರಾಧಾ ಸ್ವಾಗತಿದರು.ಕಾರ್ಯದರ್ಶಿ ಲಕ್ಷ್ಮೀ ವಂದಿಸಿದರು.

Post a Comment

0 Comments