ಮೂಡುಮಾರ್ನಾಡು: ಬಾವಿಗೆ ಬಿದ್ದ ದನವನ್ನು ರಕ್ಷಿಸಿದ ಹಿಂಜಾವೇ ಕಾರ್ಯಕರ್ತರು

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಮಾರ್ನಾಡು: ಬಾವಿಗೆ ಬಿದ್ದ ದನವನ್ನು ರಕ್ಷಿಸಿದ ಹಿಂಜಾವೇ ಕಾರ್ಯಕರ್ತರು



ಮೂಡುಬಿದಿರೆ: ಪಡುಮಾರ್ನಾಡು ಗ್ರಾ.ಪಂನ ಮೂಡುಮಾರ್ನಾಡು ಗ್ರಾಮದ ಕಾಡಿನ ಮಧ್ಯೆ ಪಾಳು ಬಾವಿಯಲ್ಲಿ ಬಿದ್ದಿದ್ದ ದನವನ್ನು  ಹಿಂ.ಜಾ.ವೇ ಕಾರ್ಯಕರ್ತರು ಭಾನುವಾರ ರಕ್ಷಿಸಿದ ಘಟನೆ ನಡೆದಿದೆ.

 ನಿರಂತರವಾಗಿ ಸುರಿಯುತ್ತಿದ್ದ ಮಳೆಯ ನಡುವೆ ಮೂಡುಮಾರ್ನಾಡು ಗ್ರಾಮದ  ಹಾಡಿಯಲ್ಲಿ ಪಾಳು ಬಿದ್ದಿದ್ದ ದನದ ಬೊಬ್ಬೆಯನ್ನು ಕೇಳಿದ ಮಹಿಳೆಯೊಬ್ಬರು ಹಿಂದು ಜಾಗರಣದ ಕಾರ್ಯಕರ್ತರೊಬ್ಬರಿಗೆ ಮಾಹಿತಿ ನೀಡಿದ್ದರು. ಈ ಸಂದರ್ಭ ಭೂತರಾಜ ಘಟಕ ಹಾಗೂ ಕುಂಭಕಂಠಿಣಿ ಘಟಕದ ಕಾರ್ಯಕರ್ತರು ತಕ್ಷಣ ಸ್ಥಳಕ್ಕೆ ಧಾವಿಸಿ  ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ತಕ್ಷಣ ಕಾರ್ಯಪ್ರವೃತರಾಗಿ ಬಾವಿಗೆ ಇಳಿದು ದನಕ್ಕೆ ಹಗ್ಗವನ್ನು ಹಾಕಿ ಮೇಲಕ್ಕೆತ್ತಿ ರಕ್ಷಿಸಿ ರಕ್ಷಿಸಿ ಮನೆಯವರಿಗೆ ಒಪ್ಪಿಸಿರುತ್ತಾರೆ.


Post a Comment

0 Comments