ಮುನಿಶ್ರೀ 108 ಕಾಮಕುಮಾರನಂದಿ ಮುನಿಮಹಾರಾಜರ ಬರ್ಬರ ಹತ್ಯೆಯನ್ನು ಖಂಡಿಸಿ ಮಂಗಳೂರು ನಲ್ಲಿ ಮೌನ ಪ್ರತಿಭಟನಾ ಮೆರವಣಿಗೆ

ಜಾಹೀರಾತು/Advertisment
ಜಾಹೀರಾತು/Advertisment

 *ಪರಮಪೂಜ್ಯ ಮುನಿಶ್ರೀ 108 ಕಾಮಕುಮಾರನಂದಿ ಮುನಿಮಹಾರಾಜರ ಬರ್ಬರ ಹತ್ಯೆಯನ್ನು ಖಂಡಿಸಿ ಸಮಗ್ರ ತನಿಖೆಗಾಗಿ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ಹಾಗೂ ಸಮಸ್ತ ಜೈನ ಸಮಾಜ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಮಂಗಳೂರು ನಲ್ಲಿ  ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು*



ದಿಗಂಬರ ಜೈನ ಮುನಿಗಳಾದ ಪರಮಪೂಜ್ಯ ಮುನಿಶ್ರೀ 108 ಕಾಮಕುಮಾರನಂದಿ ಮುನಿಮಹಾರಾಜರ ಬರ್ಬರ ಹತ್ಯೆಯನ್ನು ಖಂಡಿಸಿ ಸಮಗ್ರ ಉನ್ನತವಾದ ತನಿಖೆಗಾಗಿ ಮತ್ತು ಜೈನ ಸಮಾಜದ ಉಳಿದ ಮುನಿಗಳಿಗೆ ,  ತ್ಯಾಗಿಗಳಿಗೆ ಸೂಕ್ತ ರಕ್ಷಣೆಯನ್ನು ನೀಡಲು ಸರಕಾರ ಕ್ರಮ ಕೈಗೋಳ್ಳಬೇಕಾಗಿ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ನೇತೃತ್ವದಲ್ಲಿ ಸಮಸ್ತ  ಜೈನ ಸಮಾಜ ನಗರದಲ್ಲಿ 10-7-2023 (ಸೋಮವಾರ) ಮೌನ ಪ್ರತಿಭಟನಾ ಮೆರವಣಿಗೆ ನಡಿಸಿ  ದ.ಕ ಜಿಲ್ಲಾಧಿಕಾರಿ  ಮೂಲಕ  ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳದ ಶ್ರೀ ಸಿದ್ದರಾಮಯ್ಯ ಮನವಿ ಪತ್ರವನ್ನು ಸಲ್ಲಿಸಲಾಗಿತು.



ಈ ಸಂದರ್ಭದಲ್ಲಿ ಮೂಡುಬಿದಿರೆ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸಿದ್ದರು.

ಪುಷ್ಪರಾಜ್ ಜೈನ್ ಮಂಗಳೂರು,  ಸುರೇಶ್ ಬಲ್ಲಾಳ್ ಮಂಗಳೂರು,  ಸುದರ್ಶನ್ ಜೈನ್ ಬಂಟ್ವಾಳ, ರತ್ನಾಕರ್  ಜೈನ್ ಮಂಗಳೂರು , ಜಗತ್ಪಾಲ್ ಜೈನ್, ಮಹಾವೀರ್ ಪ್ರಸಾದ್, ಶ್ವೇತಾ ಜೈನ್ ಮೂಡುಬಿದಿರೆ, ಸುಭಾಷ್ ಚಂದ್ರ ಜೈನ್ ಬಂಟ್ವಾಳ, ವರ್ಧಮನ್ ಜೈನ್, ಸುದೇಶ್ ಜೈನ್ ಮಕ್ಕಿಮನೆ ಸಹಿತ ಅನೇಕ ಗಣ್ಯರು,  ಜೈನ ಸಮಾಜದ ಶ್ರಾವಕ - ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ನಗರದ ಕ್ಲಾಕ್ ಟವರ್ ನಿಂದ ಜಿಲ್ಲಾಧಿಕಾರಿ ಕಚೇರಿ ಯವರಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು.

Post a Comment

0 Comments