ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆ, ಬೆಳುವಾಯಿ : ಸಮವಸ್ತ್ರ, ಬರೆಯುವ ಪುಸ್ತಕ ವಿತರಣೆ,

ಜಾಹೀರಾತು/Advertisment
ಜಾಹೀರಾತು/Advertisment

 *ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆ, ಬೆಳುವಾಯಿ ಇಲ್ಲಿ ಸಮವಸ್ತ್ರ, ಬರೆಯುವ ಪುಸ್ತಕ ವಿತರಣೆ, ಎಸ್. ಎಸ್. ಎಲ್. ಸಿ ಪರೀಕ್ಷೆ ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿನಿ ಸನ್ಮಾನ, ಧಾನಿಗಳ ಸನ್ಮಾನ, ಪೋಷಕರ ಸಭೆ, ಶಾಲಾ ಮಂತ್ರಿ ಮಂಡಲದ ಪ್ರಮಾಣ ವಚನ ಕಾರ್ಯಕ್ರಮ



ವಿದ್ಯಾವರ್ಧಕ ಸಂಘ (ರಿ ) ಬೆಳುವಾಯಿ ಇದರಿಂದ ನಡೆಸಲ್ಪಡುವ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆ, ಬೆಳುವಾಯಿ, ಇಲ್ಲಿ ದಿ 17-06-2023ನೇ ಶನಿವಾರ ಪ್ರಥಮ ಪೋಷಕರ ಸಭೆ ಜರುಗಿತು. ಹಳೆ ವಿದ್ಯಾರ್ಥಿ ಜೇಮ್ಸ್ ಡಿ ಸೋಜಾ, ಕಾಯರಕಟ್ಟೆ ಇವರು ಕೊಡಮಾಡಿದ ಬರೆಯುವ ಪುಸ್ತಕ, ಶ್ರೀಮತಿ ಅನಿತಾ ಅರುಣ್ ಡಿ ಸೋಜಾ, ಮೂಡುಬಿದ್ರಿ ಇವರು ಕೊಡಮಾಡಿದ ಸಮವಸ್ತ್ರ ವನ್ನು ವಿತರಿಸಲಾಯಿತು. ಅವರಿಬ್ಬರನ್ನು ಅವರ ಅನುಪಸ್ಥಿತಿಯಲ್ಲಿ ಅಭಿನಂದಿಸಲಾಯಿತು. ಪ್ರತಿ ವರ್ಷವು ಸಮವಸ್ತ್ರ ಗಳನ್ನು ನೀಡಿ ಪ್ರೋತ್ಸಾಹಿ ಸುತ್ತಿದ್ದ ಸ್ಥಳೀಯ ಬಿ. ಸಿ. ಸಿ. ಅಧ್ಯಕ್ಷರು ನಝೀರ್ ಶೇಖ್ ಇವರನ್ನು ಸನ್ಮಾನಿ ಸಲಾಯಿತು. ಅಲ್ಲದೆ ಕಳೆದ ಸಾಲಿನ ಎಸ್. ಎಸ್. ಎಲ್. ಸಿ. ಪರೀಕ್ಷೆ ಯಲ್ಲಿ ಡಿಸ್ಟಿಂಕ್ಷನ್ ಶ್ರೇಣಿ ಯಲ್ಲಿ ತೇರ್ಗಡೆ ಹೊಂದಿದ ಕುಮಾರಿ ಫಾತಿಮಾತ್ ಫಾರಿಷಾ ಇವಳನ್ನು ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿದ ನಝೀರ್ ಶೇಖ್ ರವರು ತಾನು ಶಿಕ್ಷಣಕ್ಕಾಗಿ ಪಟ್ಟ ಕಷ್ಟ, ಗ್ರಾಮೀಣ ಪ್ರದೇಶ ದ ಈ ಸಂಸ್ಥೆ ಯನ್ನು ಧಾನಿಗಳು ಮತ್ತು ಹಳೆ ವಿದ್ಯಾರ್ಥಿಗಳು ಧನಸಹಾಯ ನೀಡಿ ಉಳಿಸಿ ಬೆಳೆಸುವಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು. ಕುಮಾರಿ ಫಾತಿಮಾತ್ ಫಾರಿಷಾ ಇವಳು ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟಲ್ಲಿ ಯಶಸ್ಸು ಸಾಧ್ಯ, ಶಿಕ್ಷಕರ ಮತ್ತು ಹೆತ್ತವರ ಪ್ರೋತ್ಸಾಹದಿಂದ ಉತ್ತಮ ಅಂಕ ಪಡೆಯಲು ಸಾಧ್ಯ ವಾಯಿತು, ಎಲ್ಲಾ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸುವಂತೆ ಶುಭಹಾರೈಸಿದಳು. ಶಾಲಾ ಮಂತ್ರಿ ಮಂಡಲದ ಸದಸ್ಯರಾಗಿ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಕಾರ್ಯ ನಿರ್ವಹಿಸುವಂತೆ ಹಾರೈಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಅಧ್ಯಕ್ಷರು ಕಂಡಿಗ ರತ್ನಾಕರ ಶೆಟ್ಟಿ ಯವರು ಶುಭ ಹಾರೈಸಿದರು. ಸಂಚಾಲಕರು ರಾಜೇಶ್ ಸುವರ್ಣ, ನ್ಯಾಯವಾದಿಗಳು, ಬಡತನ ಶಾಪವಲ್ಲ ಶಿಕ್ಷಣ ದಿಂದ ಅದನ್ನು ದೂರ ಮಾಡಬಹುದು, ವಿದ್ಯಾಭಿಮಾನಿಗಳು, ಹಳೆ ವಿದ್ಯಾರ್ಥಿಗಳು ಸಹಕರಿಸಿ ಹಿರಿಯರು ಕಟ್ಟಿ ಬೆಳೆಸಿದ ಈ ಸಂಸ್ಥೆಯನ್ನು ಉಳಿಸಬೇಕು ಎಂದು ಹಿತ ವಚನ ನೀಡಿದರು. ಕಾರ್ಯದರ್ಶಿ ಗುಣಪಾಲ ಮುದ್ಯ ವಾಲ್ಪಾಡಿ ಗುತ್ತು ಇವರು ಶಾಲೆಯನ್ನು ಎಲ್ಲಾ ವರ್ಗದ ವಿದ್ಯಾರ್ಥಿ ಗಳು ಯಾವುದೇ ತೊಂದರೆ ಇಲ್ಲದೆ 7 ರ ನಂತರದ ಶಿಕ್ಷಣವನ್ನು ಮುಂದುವರಿಸಬೇಕು, ಎಲ್ಲರಿಗೂ ಶಿಕ್ಷಣ ದೊರಕಬೇಕು ಎಂಬ ಉದ್ದೇಶದಿಂದ ಬಹಳ ಕಷ್ಟ ಪಟ್ಟು ಸಂಸ್ಥೆ ಯನ್ನು ಸ್ಥಾಪಿಸಿದ ಹಿರಿಯರನ್ನು ನೆನಪಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಭವಿಷ್ಯವನ್ನು ರೂಪಿಸಿ ಕೊಳ್ಳಿ ಎಂದು ಶುಭಹಾರೈಸಿದರು. ಹಿರಿಯ ಸದಸ್ಯ ಯುವರಾಜ ಹೆಗ್ಡೆ ಕಲ್ಲೋಳಿ ಯವರು ವಿದ್ಯಾರ್ಥಿಗಳು ಮೊಬೈಲ್ ಉಪಯೋಗವನ್ನು ಕಡಿಮೆ ಮಾಡುವಂತೆ ತಿಳಿಸಿದರು. ಪ್ರಜ್ಞಾ ಸಂಸ್ಥೆಯ ಅಧಿಕ್ಷಕಿ ಕುಮಾರಿ ಸವಿತಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮುಖ್ಯ ಶಿಕ್ಷಕರು ಅಣ್ಣಿ ಎಂ ಸ್ವಾಗತಿಸಿ ಗೌರವ ಶಿಕ್ಷಕಿ ಭವಾನಿ ಯವರು ಧನ್ಯವಾದ ಸಲ್ಲಿಸಿದರು. ಪದವೀಧರ ಸಹಾಯಕ ವಲೇರಿಯನ್ ಮೊಂತೆರೋ ಕಾರ್ಯಕ್ರಮ ನಿರ್ವಹಿಸಿ ದೈಹಿಕ ಶಿಕ್ಷಕರು ಪ್ರಶಾಂತ್ ಕುಮಾರ್ ಮತ್ತು ಗೌರವ ಶಿಕ್ಷಕಿ ಸಂಗೀತ ರವರು ಸಹಕರಿದರು.



Post a Comment

0 Comments