ಮೂಡುಬಿದಿರೆಯಲ್ಲಿ ಆದಿತ್ಯವಾರ ರಕ್ತದಾನ ಶಿಬಿರ:ವಿವಿಧ ಸಂಸ್ಥೆಗಳ ನೇತೃತ್ವ
ಯುವ ವಾಹಿನಿ ಮೂಡುಬಿದಿರೆ ಘಟಯ, IIFL ಫೈನಾನ್ಸ್ ಮೂಡುಬಿದಿರೆ, ಆಳ್ವಾಸ್ ಹೆಲ್ತ್ ಸೆಂಟರ್ ಮೂಡುಬಿದಿರೆ ಸಮಾಜ ಮಂದಿರ ಸಭಾ ಮೂಡುಬಿದಿರೆ ಇವುಗಳ ಸಾಂಘಿಕ ಆಶ್ರಯದಲ್ಲಿ ದಿನಾಂಕ 25.06.2023ರ ಆದಿತ್ಯವಾರ ಮೂಡುಬಿದಿರೆಯ ಸಮಾಜ ಮಂದಿರ ಸಭಾ ಭವನದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.
ಬೆಳಿಗ್ಗೆ 9.00 ಗಂಟೆಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಮಾಜಿ ಸಚಿವರಾದ ಕೆ ಅಭಯಚಂದ್ರ ಜೈನ್, ಆಳ್ವಾಸ್ ಹೆಲ್ತ್ ಸೆಂಟರ್ ನ ಮುಖ್ಯಸ್ಥರಾದ ಡಾ.ವಿನಯ್ ಆಳ್ವಾ, ಯುವ ವಾಹಿನಿ ಘಟಕದ ಅಧ್ಯಕ್ಷರಾದ ಸುಶಾಂತ್ ಕರ್ಕೇತ, IIFL ಫೈನಾನ್ಸ್ ನ ಪ್ರಾದೇಶಿಕ ವ್ಯವಸ್ಥಾಪಕರಾದ ಥೋಮಸ್ ವಿಟಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
0 Comments