ಸೂಲಿಬೆಲೆ, ಭಜರಂಗದಳದ ಟಾರ್ಗೆಟ್ ಬಿಟ್ಟು ಮೊದಲು ನೀರು ಕೊಡಿ:ಸಚಿದ್ವಯರಿಗೆ ಕೋಟ ಚಾಟಿ

ಜಾಹೀರಾತು/Advertisment
ಜಾಹೀರಾತು/Advertisment

 ಸೂಲಿಬೆಲೆ, ಭಜರಂಗದಳದ ಟಾರ್ಗೆಟ್ ಬಿಟ್ಟು ಮೊದಲು ನೀರು ಕೊಡಿ:ಸಚಿದ್ವಯರಿಗೆ ಕೋಟ ಚಾಟಿ 




ಒಂದು ಕಡೆ ಸಚಿವ ಎಂ.ಬಿ.ಪಾಟೀಲರು ರಾಷ್ಟ್ರೀಯವಾದಿ ಚಕ್ರವರ್ತಿ ಸೂಲಿಬೆಲೆಯನ್ನು ಜೈಲಿಗಟ್ಟುತ್ತೇವೆ ಎನ್ನುತ್ತಾರೆ. ಮತ್ತೊಂದು ಕಡೆ ಸಚಿವ ಪ್ರಿಯಾಂಕ್ ಖರ್ಗೆ ಭಜರಂಗದಳ ನಿಷೇಧ ಮಾಡುತ್ತವೆ ಎನ್ನುತ್ತಾರೆ. ಇವರೆಲ್ಲರೂ ಮೊದಲು ಕರಾವಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಬರಗಾಲ ಎದುರಾಗಿದ್ದು ಈ ಪರಿಸ್ಥಿತಿಗೆ ಸ್ಪಂದಿಸಲಿ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಶಾಸಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.


ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಅವರು ಕರಾವಳಿ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ನೀರಿನ ಟ್ಯಾಂಕರ್ ಪಡೆಯಲು ಕೂಡಲೇ ಹಣ ಬಿಡುಗಡೆ ಮಾಡಬೇಕು. ಪಂಚಾಯತ್ ಸಚಿವರಾದ ಪ್ರಿಯಾಂಕ್ ಖರ್ಗೆ ಇದನ್ನು ಚಿಂತಿಸುವ ಬದಲು ಭಜರಂಗದಳ ನಿಷೇಧಿಸುವ ಚಿಂತನೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Post a Comment

0 Comments