ಕಾಂಗ್ರೆಸ್ ನಿಂದ ಧ್ವೇಷದ ರಾಜಕರಣ : ಶಾಸಕ ಉಮಾನಾಥ ಕೋಟ್ಯಾನ್ ಆರೋಪ
ಮೂಡುಬಿದಿರೆ: ಗುತ್ತಿಗೆದಾರರ ಅಧ್ಯಕ್ಷರಿಗೆ ಕೋಟಿಗಟ್ಟಲೆ ಹಣ ನೀಡಿ, ಶೇ.40 ಆರೋಪದ ಸಂಚು ಹೂಡಿದ್ದ ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಮಾಜಿ ಶಾಸಕರು, ಕಾಂಗ್ರೆಸ್ ನಾಯಕರು ವಿವಿಧ ಇಲಾಖೆಯ ಅಧಿಕಾರಿಗಳಿಗೆ ನಮ್ಮ ಸರ್ಕಾರ ಇದೆ ಎಂದು ದರ್ಪ ತೋರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಘ ಪರಿವಾರದ ಕಾರ್ಯಕರ್ತರನ್ನು ಸುಳ್ಳು ನೆಪವೊಡ್ಡಿ ಬಂಧಿಸಲು ಪ್ರಯತ್ನಿಸಲಾಗುತ್ತಿದೆ. ಕಾಂಗ್ರೆಸ್ ಅಭಿವೃದ್ಧಿಯತ್ತ ಗಮನ ಕೊಡದೆ, ಧ್ವೇಷ ರಾಜಕಾರಣಕ್ಕೆ ಮುಂದಾಗುತ್ತಿದೆ ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಆರೋಪಿಸಿದರು.
ಅವರು ಬಿಜೆಪಿ ಮಂಡಲದ ವತಿಯಿಂದ ಶನಿವಾರ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಅನೇಕ ಉಚಿತ ಯೋಜನೆಗಳ ಅಮೀಷಗಳನೊಡ್ಡಿ, ಈಗ ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಅದನ್ನು ಸಮರ್ಪಕವಾಗಿ ಜಾರಿಗೊಳಿಸದೆ ಜನರನ್ನು ಲೂಟಿ ಮಾಡುತ್ತಿದೆ ಎಂದೂ ಆರೋಪಿಸಿದರು.
ಬಿಜೆಪಿ ಮೂಡುಬಿದಿರೆ ಮಂಡಲ ಅಧ್ಯಕ್ಷ ಸುನೀಲ್ ಆಳ್ವ ಮಾತನಾಡಿ, ವಿದ್ಯುತ್ ದರ ಏರಿಕೆ, ಮತಾಂತರ ಕಾಯ್ದೆ ವಾಪಸು ಹಾಗೂ ಪಠ್ಯ ಪುಸ್ತಕದಲ್ಲಿ ಹೆಡಗೆವಾರ್, ಸಾವರ್ಕರ್ ಪಠ್ಯಗಳನ್ನು ರದ್ದುಗೊಳಿಸಿರುವುದನ್ನು ಖಂಡಿಸುತ್ತೇವೆ. ಹಿಂದೂ ವಿರೋಧಿ ನಿಲುವುಗಳನ್ನೇ ಮಾನದಂಡವಾಗಿರಿಸಿಕೊAಡು ಸಿದ್ದರಾಮಯ್ಯ ಸರ್ಕಾರ ಮತಾಂತರ ನಿಷೇಧ ಕಾನೂನನ್ನು ವಾಪಾಸು ಪಡೆಯಲು ಹೊರಟಿರುವುದು ಗಾಂಧೀಜಿಯವರ ಸಮಾಜವಾದದ ವಿರುದ್ಧವಾಗಿದೆ. ಪಠ್ಯ ಪುಸ್ತಕದಲ್ಲಿ ಪಠ್ಯಗಳನ್ನು ರದ್ದು ಮಾಡುವ ಮೂಲಕ ಶಿಕ್ಷಣದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಈಶ್ವರ್ ಕಟೀಲ್, ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಕಾರ್ಯಾಲಯ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಕೇಶವ ಕರ್ಕೇರ, ಗೋಪಾಲ ಶೆಟ್ಟಿಗಾರ್, ಸುದ್ದಿಗೋಷ್ಠಿಯಲ್ಲಿದ್ದರು.
0 Comments