ಮೂಡುಬಿದಿರೆ: ಬಾಬು ರಾಜೇಂದ್ರ ಪ್ರಸಾದ್ ಪ್ರೌಢ ಶಾಲೆಯಲ್ಲಿ ಸ್ಥಾಪಕರ ದಿನಾಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಬಾಬು ರಾಜೇಂದ್ರ ಪ್ರಸಾದ್ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಸ್ಥಾಪಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.



 ಶಾಲಾ ಆಡಳಿತ ಮಂಡಳಿಯ ಗೌರವಾಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ  ಶಾಲೆಯನ್ನು ವ್ಯಾಪಾರದ ಉದ್ದೇಶದ ಇರದೇ ಸೇವಾ ಮನೋಭಾವದಿಂದ ಕಟ್ಟಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿ ಶಾಲಾ ಸ್ಥಾಪಕರನ್ನು ಸ್ಮರಿಸಿಕೊಂಡರು. 

       ಅತಿಥಿಯಾಗಿ ಆಗಮಿಸಿದ್ದ ಪ್ರಾಚಾರ್ಯ ಉದಯ ಕುಮಾರ್ ಇರ್ವತ್ತೂರು ಮಾತನಾಡಿ ಶಾಲೆಯಲ್ಲಿ ನೀಡಿದ ಸವಲತ್ತುಗಳನ್ನು ಚೆನ್ನಾಗಿ ಬಳಸಿಕೊಳ್ಳಿ ಮತ್ತು ಆಸಕ್ತಿಯನ್ನು ಗುರುತಿಸಿ ಬೆಳಸಿ ಎಂದು ಕಿವಿ ಮಾತು ನುಡಿದರು. ಬಾಲ ಕಾರ್ಮಿಕ ವಿರೋಧ ದಿನಾಚರಣೆ ಕುರಿತಾಗಿ ಶಿಕ್ಷಕ ಶಂಕರ್ ಭಟ್ ಮಾಹಿರಿ ನೀಡಿದರು. ಶಾಲಾ ಹಸ್ತ ಪ್ರತಿ ಸಂಚಿಕೆ "ರಾಜೇಂದ್ರ" ವನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಬಿಡುಗಡೆ ಗೊಳಿಸಿದರು. ಸ್ಥಾಪಕರ ಕುರಿತಾಗಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ರಾಮನಾಥ ಭಟ್ ಮಾಹಿತಿ ನೀಡಿ ಸ್ಮರಿಸಿದರು. ವಿದ್ಯಾರ್ಥಿ ಆಕರ್ಷ್ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಪದ್ಮಜಾ ಸ್ವಾಗತಿಸಿದರು. ಶಿಕ್ಷಕ ಕಿರಣ್ ಕುಮಾರ್ ನಿರ್ವಹಿಸಿದರು. ಶಿಕ್ಷಕ ಅಣ್ಣು ವಂದಿಸಿದರು.

Post a Comment

0 Comments