ಮೂಡುಬಿದಿರೆಯಲ್ಲಿ ಮಿಥುನ್ ರೈ ಮತ ಪ್ರಚಾರ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ಮಿಥುನ್ ರೈ ಮತ ಪ್ರಚಾರ



ಮೂಡುಬಿದಿರೆ: ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಶುಕ್ರವಾರ ಮೂಡುಬಿದಿರೆಯಲ್ಲಿ ಕಾರ್ಯಕರ್ತರೊಂದಿಗೆ ಮತ ಪ್ರಚಾರ ನಡೆಸಿದರು.

 ವಿದ್ಯಾಗಿರಿ, ಮೂಡುಬಿದಿರೆ ರಿಕ್ಷಾ ಪಾಕ್೯, ಆಲಂಗಾರು ಅಬ್ಬಾಸ್ ಮಿಲ್ಲ್, ಮಾಸ್ತಿಕಟ್ಟೆಯ‌ ಮದಕ, ಬೋವಿ ಕಾಲನಿ, ಮೊಗೇರ ಕಾಲನಿ, ನಾಯ್ಕರ ಕಾಲನಿ, ಮೂಡುಬಿದಿರೆ ಮತ್ತು ಲಾಡಿ ಮಸೀದಿ, ವಿಜಯಲಕ್ಷ್ಮೀ ಇಂಡಸ್ಟ್ರೀಸ್, ಸ್ವರಾಜ್ಯ ಮೈದಾನ, ಆಲಂಗಾರು, ಕಡ್ದಬೆಟ್ಟು, ಕೊಡಂಗಲ್ಲು ಮತ್ತು ಬಂಗಾಲಪದವು ಕಾಲನಿಗಳಿಗೆ ಮಿಥುನ್ ರೈ  ಭೇಟಿ ನೀಡಿ ಮತಯಾಚಿಸಿದರು.

  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪುರಸಭಾ ಸದಸ್ಯರಾದ ಪಿ.ಕೆ.ಥೋಮಸ್, ಪುರಂದರ ದೇವಾಡಿಗ, ಇಕ್ಬಾಲ್ ಕರೀಂ, ಕೊರಗಪ್ಪ, ಸುರೇಶ್ ಕೋಟ್ಯಾನ್, ಜೊಸ್ಸಿ ಮಿನೇಜಸ್, ರೂಪಾ ಶೆಟ್ಟಿ, ಸುಪ್ರಿಯಾ ಡಿ.ಶೆಟ್ಟಿ, ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸದಸ್ಯ ಪುರುಷೋತ್ತಮ ನಾಯಕ್ ಮತ್ತಿತರ ಕಾರ್ಯಕರ್ತರು  ಈ ಸಂದರ್ಭದಲ್ಲಿದ್ದರು.

Post a Comment

0 Comments