ಗುರುಗಳ ಜನ್ಮೋತ್ಸವದ ನಿಮಿತ್ತ ಹಿಂದೂ ರಾಷ್ಟ್ರ ಅಭಿಯಾನ !
ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಲು ಸನಾತನ ಸಂಸ್ಥೆಯ ವತಿಯಿಂದ ದೇವಸ್ಥಾನದ ಪಾವಿತ್ರ್ಯತೆಯ ರಕ್ಷಣೆ ಹಾಗೂ ಸ್ವಚ್ಛತಾ ಅಭಿಯಾನ !
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ 81 ನೇ ಜನ್ಮೋತ್ಸವದ ನಿಮಿತ್ತ ವಿವಿಧ ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಇದರಲ್ಲಿ ಮುಖ್ಯವಾಗಿ ದೇವಸ್ಥಾನಗಳ ಸ್ವಚತೆ, ಲೋಕಕಲ್ಯಾಣಕ್ಕಾಗಿ ಸಾಮೂಹಿಕ ಪ್ರಾರ್ಥನೆ, ಸುಸಂಸ್ಕಾರ ನಿರ್ಮಾಣ ಮಾಡಲು ಸಾಧನಾ ಪ್ರವಚನ ಇತ್ಯಾದಿ ಉಪಕ್ರಮಗಳನ್ನು ನಡೆಸಲಾಗುತ್ತಿದೆ. ಅದೇ ರೀತಿ, ವಿವಿಧ ಸಂಪ್ರದಾಯಗಳು, ಧಾರ್ಮಿಕ ಸಂಘಟನೆಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳ ಸಹಭಾಗದೊಂದಿಗೆ ಹಿಂದೂ ಐಕ್ಯತಾ ಮೆರವಣಿಗೆಯ ಆಯೋಜನೆಯನ್ನು ಸಹ ಮಾಡಲಾಗುತ್ತಿದೆ.
ಈ ಅಭಿಯಾನವು ಶ್ರೀರಾಮನವಮಿಯಿಂದ ಪ್ರಾರಂಭವಾಗಿ ಮೇ ತಿಂಗಳ ಕೊನೆಯ ವಾರದವರೆಗೂ ಇಡೀ ದೇಶದಾದ್ಯಂತ ನಡೆಯಲಿದೆ. ಈ ಅಭಿಯಾನದ ನಿಮಿತ್ತ ಶ್ರೀ ಬಾಲಾಜಿ ಧರ್ಮ ಜಾಗೃತಿ ಸಮಿತಿಯ ವತಿಯಿಂದ ಉಪ್ಪುರು ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಸ್ವಚ್ಚತೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಬಾಲಾಜಿ ಧರ್ಮ ಜಾಗೃತಿ ಸಮಿತಿಯ ಕಾರ್ಯಕರ್ತರು ಹಾಗೂ ದೇವಸ್ಥಾನ ಅಡಳಿತ ವೃಂದದವರು ಉಪಸ್ಥಿತರಿದ್ದರು.
0 Comments