ಮೂಡುಬಿದಿರೆ: ಎಕ್ಸಲೆಂಟ್ ಶಾಲೆಯಲ್ಲಿ ಸಮಾಜ ವಿಜ್ಞಾನ ಕಾರ್ಯಾಗಾರ
ಮೂಡುಬಿದಿರೆ: ಇಲ್ಲಿನ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಮಾಜವಿಜ್ಞಾನ ಶಿಕ್ಷಕರಿಗೆ ಕಲಿಕೋಪಕರಣದ ಕುರಿತಾಗಿ ಆಯೋಜಿಸಿದ ಕಾರ್ಯಾಗಾರದಲ್ಲಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ಡಾ.ಶಂಕರ್ ಶಾಸ್ತಿç ಅವರು ಚಟುವಟಿಕೆ ಆಧಾರಿತ ತರಗತಿಗಳ ಬಗ್ಗೆ ಮಾಹಿತಿ ನೀಡಿದರು.
ಸಮಾಜವಿಜ್ಞಾನ ವಿಷಯ ಬೋಧನೆಯು ಪರಿಣಾಮಕಾರಿಯಾಗಲು ಶಿಕ್ಷಕರು ಕೇವಲ ಪಠ್ಯವಸ್ತುವಿನ ಅವಲಂಬಿತರಾಗದೆ ವಿದ್ಯಾರ್ಥಿಗಳ ಕಲಿಕಾಂಶವನ್ನು ದಿನನಿತ್ಯ ಜೀವನಕ್ಕೆ ಸಮನ್ವಯಿಕರಿಸಿ ಬೋಧಿಸಬೇಕು . ಸಮಾಜವಿಜ್ಞಾನ ಎಲ್ಲಾ ವಿಷಯಗಳ ತಾಯಿ ಇದ್ದಂತೆ.ಸಾಮಾಜಿಕ ಶಾಂತಿ ಮತ್ತು ಸಾಮರಸ್ಯ ಮೂಡಿಸುವ ಮಹತ್ತರ ಜವಾಬ್ದಾರಿ ಈ ವಿಷಯಕ್ಕಿದೆ ಎಂದು ಅಭಿಪ್ರಾಯಪಟ್ಟರು. ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಕಲಿಕೋಪಕರಣಗಳನ್ನು ತಯಾರಿಸುವ ಕುರಿತು ತಿಳಿಸಿಕೊಟ್ಟರು.
ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
0 Comments