*ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಇವರಿಂದ ಗೋವಾದಲ್ಲಿ ನಡೆಯಲಿರುವ ‘ಸಿ-20 ಪರಿಷದ್’ನ ಮಾಹಿತಿ ನೀಡುವ ಪುಸ್ತಕ ಪ್ರಕಾಶನ !*
ಮೇ 27 ರಂದು ಗೋವಾದ ವಾಸ್ಕೊದಲ್ಲಿ ನಡೆಯಲಿರುವ 'ಸಿ-20 ಪರಿಷದ್'ನ ಮಾಹಿತಿಯನ್ನು ನೀಡುವ ಪುಸ್ತಕವನ್ನು ಗೋವಾ ರಾಜ್ಯದ ಮುಖ್ಯಮಂತ್ರಿ ಶ್ರೀ. ಪ್ರಮೋದ ಸಾವಂತ ಇವರ ಹಸ್ತದಿಂದ ಪಣಜಿಯ ಸರಕಾರಿ ನಿವಾಸದಲ್ಲಿ ಪ್ರಕಾಶಿಸಲಾಯಿತು. ಈ ಸಮಯದಲ್ಲಿ 'ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ'ದ ಸಂಶೋಧನೆ ಸಮನ್ವಯಕ ಸೌ. ಶ್ವೇತಾ, ಡಾ. (ಸೌ.) ಅಮೃತಾ ದೇಶಮಾನೆ ಹಾಗೂ ಉದ್ಯಮಿ ಶ್ರೀ. ನಾರಾಯಣ ನಾಡಕರ್ಣಿ ಇವರು ಉಪಸ್ಥಿತರಿದ್ದರು.
ಪಣಜಿಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಅಂತರರಾಷ್ಟ್ರೀಯ ‘ಜಿ-20’ಗೆ ಪ್ರತ್ಯೇಕ ಕೊಠಡಿ ಸಿದ್ಧಪಡಿಸಲಾಗಿದೆ. ಈ ಕೊಠಡಿಯಲ್ಲಿ 'ಸಿ-20 ಪರಿಷದ್'ನ ಮಾಹಿತಿ ಪುಸ್ತಕವನ್ನು ಪ್ರಕಟಿಸಲಾಯಿತು. ಈ 'ಸಿ-20 ಪರಿಷತ್' ಅನ್ನು ಗೋವಾ ಸರಕಾರ, 'ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ', 'ಇಂಟರನ್ಯಾಶನಲ್ ಸೆಂಟರ್ ಫಾರ್ ಕಲ್ಚರಲ್ ಸ್ಟಡಿಸ್' ಮತ್ತು 'ಭಾರತೀಯ ವಿದ್ಯಾ ಭವನ, ನವದೆಹಲಿ'ಯ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ. ಮೇ 27 ರಂದು ವಾಸ್ಕೋದಲ್ಲಿ 'ವೈವಿಧ್ಯತೆ, ಸರ್ವಸಮಾವೇಶಕ ಮತ್ತು ಪರಸ್ಪರ ಗೌರವ' ಈ ಕುರಿತು 'ಸಿ-20 ಪರಿಷತ್' ವಾಸ್ಕೋದಲ್ಲಿ ನಡೆಯಲಿದೆ. ಇದರಲ್ಲಿ ಗೋವಾ ಸಹಿತ ದೇಶ-ವಿದೇಶದ ಗಣ್ಯರು ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ಮಾಡಲಿದ್ದಾರೆ. ಈ ಪ್ರಕಟಣೆಯ ನಂತರ ಮಾ. ಮುಖ್ಯಮಂತ್ರಿ ಪ್ರಮೋದ ಸಾವಂತ ಅವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾನಿಲಯ ನಡೆಸಿದ ವಿವಿಧ ಆಧ್ಯಾತ್ಮಿಕ ಸಂಶೋಧನೆಗಳನ್ನು ನೋಡಿ ಕಾರ್ಯಗಳ ಬಗ್ಗೆ ತಿಳಿದುಕೊಂಡರು ಮತ್ತು ಈ ಕಾರ್ಯವನ್ನು ಶ್ಲಾಘಿಸಿದರು.
0 Comments