ಖೇಲೋ ಇಂಡಿಯಾ ಯುನಿರ್ವಸಿಟಿ ಗೇಮ್ಸ್ 2022
ಆಳ್ವಾಸ್‌ನ 37 ಕ್ರೀಡಾಪಟುಗಳು ಆಯ್ಕೆ
ಮೂಡುಬಿದಿರೆ: ಉತ್ತರ ಪ್ರದೇಶದ ಲಕ್ನೋದ ಗುರು ಗೋಬಿಂದ್ ಸಿಂಗ್ ಸ್ಫೋರ್ಟ್ಸ್ ಕಾಲೇಜು ಕ್ರೀಡಾಂಗಣದಲ್ಲಿ ಮೇ 29 ರಿಂದ ಮೇ 31ರವರೆಗೆ ನಡೆಯುವ ಖೇಲೋ ಇಂಡಿಯಾ ಯುನಿರ್ವಸಿಟಿ ಗೇಮ್ಸ್ 2022ಕ್ಕೆ ಆಳ್ವಾಸ್‌ನ 37 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯವನ್ನು ಅಥ್ಲೆಟಿಕ್ಸ್ನಲ್ಲಿ ಪ್ರತಿನಿಧಿಸುವ 29 ಕ್ರೀಡಾಪಟುಗಳ ಪೈಕಿ 25 ಹಾಗೂ ಮಲ್ಲಕಂಬದ ಎಲ್ಲ 12 ಕ್ರೀಡಾಪಟುಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
ಅಥ್ಲೆಟಿಕ್ಸ್ನಲ್ಲಿ ಆಳ್ವಾಸ್‌ನ 13 ಹುಡುಗರು ಹಾಗೂ 12 ಹುಡುಗಿಯರು ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವರು. ತಮಿಳುನಾಡು ಕ್ರೀಡಾ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 13ರಿಂದ 16ರವರೆಗೆ ನಡೆದ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೊದಲ 8 ಸ್ಥಾನ ಪಡೆದ ಕ್ರೀಡಾಪಟುಗಳು ಖೇಲೋ ಇಂಡಿಯಾ ಯುನಿರ್ವಸಿಟಿ ಗೇಮ್ಸ್ 2022 ಕ್ಕೆ ಆಯ್ಕೆಯಾಗಿದ್ದಾರೆ.
ಮಲ್ಲಕಂಬದಲ್ಲು ಆಳ್ವಾಸ್‌ನ ತಲಾ 6 ಹುಡುಗರು ಮತ್ತು ಹುಡುಗಿಯರು ಸೇರಿದಂತೆ 12 ಕ್ರೀಡಾಪಟುಗಳು ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವರು.
ರಾಜ್ಯದಿಂದ ಮಂಗಳೂರು ವಿಶ್ವವಿದ್ಯಾಲಯ ಮಾತ್ರ ಮಲ್ಲಕಂಬದಲ್ಲಿ ಸ್ಪರ್ಧಿಸಲಿದ್ದು, ಆಳ್ವಾಸ್ ಕಾಲೇಜು ತಂಡವೇ ಪ್ರತಿನಿಧಿಸಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಹಾಗೂ ವಿಶೇಷ ತರಬೇತಿಯಿಂದ ಖೇಲೋ ಇಂಡಿಯಾದಲ್ಲಿ ಮಲ್ಲಕಂಬ ಸ್ಪರ್ಧೆಗೆ ಪ್ರತಿನಿಧಿಸಲು ಸಾಧ್ಯವಾಗಿದೆ.
ಖೇಲೋ ಇಂಡಿಯಾ ಯುನಿರ್ವಸಿಟಿ ಗೇಮ್ಸ್ 3ನೇ ಬಾರಿ ನಡೆಯುತ್ತಿದ್ದು, ಮೊದಲ 2 ವರ್ಷ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಆಳ್ವಾಸ್‌ನ ವಿದ್ಯಾರ್ಥಿಗಳ ಅತ್ಯುತ್ತಮ ಪ್ರದರ್ಶನದಿಂದ ಮಂಗಳೂರು ವಿಶ್ವವಿದ್ಯಾಲಯವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆಯ್ಕೆಯಾದ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.
--
ಆಯ್ಕೆಯಾದ ಕ್ರೀಡಾಪಟುಗಳು:
ಮಣಿ ನಂದನ್, ಶಿಜಿನ್ ಥೋಮಸ್, ಮಹಾಂತೇಶ್ ಸಿದ್ಧಪ್ಪ ಹೆಲಾವಿ, ಮಿಲನ್ ಎಂ.ಸಿ, ಸುಪ್ರೀತ್ ಸಿ, ಬೊಶೇಷ್ ಮೆಹ್ಲಾ, ಉಪೇಂದ್ರ ಬಲಿಯನ್, ಸಚಿನ್ ಯಾದವ್, ಆಶೀಶ್ ಕುಮಾರ್, ಉಜ್ವಲ್, ಮನೀಶ್ ಸಿಂಗ್, ಸೌರಭ್, ಅಖಿಲೇಶ್, ಸ್ಟಾಲಿನ್ ಜೋಸ್, ಸ್ನೇಹಾ ಎಸ್.ಎಸ್, ನವಮಿ, ಜ್ಯೋತಿಕಾ, ಲಿನೆಟ್ ಜಾರ್ಜ್, ದೀಪಾಶ್ರೀ, ಸ್ನೇಹಲತಾ ಯಾದವ್, ಅರ್ಪಿತಾ ಇ.ಬಿ, ಬಸಂತಿ ಕುಮಾರಿ, ಪೂನಂ ದಿನಕರ್ ಸೋನ್ಸ್, ಪಲ್ಲವಿ ಪಾಟೀಲ್, ಭಗವತಿ ಭವಾನಿ ಯಾದವ್, ಅನುಷಾ ಯಾದವ್, ಅಂಜಲಿ, ಕೀರ್ತನಾ, ವರ್ಷಾ.
0 Comments