ಇರುವೈಲು ಶ್ರೀ ಕ್ಷೇತ್ರ ದಿಡ್ಡುನಲ್ಲಿ ದೈವಗಳ ಪುನರ್ ಪ್ರತಿಷ್ಠೆ ಮಹೋತ್ಸವ
ಮೂಡುಬಿದಿರೆ: ಇರುವೈಲು ದಿಡ್ಡು ಶ್ರೀ ಧರ್ಮರಸು ಉಳ್ಳಾಯ ಕೊಡಮಣಿತ್ತಾಯ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವವು ಕುಪ್ಪೆಪದವು ಐ ಕೃಷ್ಣ ಆಸ್ರಣ್ಣ ನೇತ್ರತ್ವದಲ್ಲಿ ಬೆಳಿಗ್ಗೆ ಪುಣ್ಯಹವಾಚನ ಗಣಹೋಮ, ಶಾಂತಿ ಪ್ರಾಯಶ್ಚಿತ್ತಾದಿಗಳು, ದೈವಗಳ ಪ್ರತಿಷ್ಠೆ, ದಾನಿಗಳಿಂದ ಬಿಂಬ ಆಭರಣಗಳ ಸಮರ್ಪಣೆ , ಪ್ರತಿಷ್ಠಾ ಪ್ರದಾನ ಹೋಮ ,ಕಲಶಾಭಿಷೇಕ ಹಾಗೂ ದೈವಗಳಿಗೆ ಪರ್ವ ಸೇವೆ, ಕೋಳಿ ಕುಂಟ ಮಹೂರ್ತ, ಕೊಡಮಣಿತ್ತಾಯ ದೈವ ದರ್ಶನ ಹಾಗೂ ಧರ್ಮರಸು ಉಳ್ಳಾಯ ದೈವದ ನೇಮೋತ್ಸವವು ವಿಜೃಂಭಣೆಯಿಂದ ನಡೆಯಿತು.
ಕ್ಷೇತ್ರದ ಪ್ರಧಾನರಾದ ಪ್ರಭಾಕರ ಪೂಜಾರಿ ದಿಡ್ಡು, ಗಡಿಕಾರರು ದೊಡ್ಡಗುತ್ತು ಜಗದೀಶ್ ಎಂ ಶೆಟ್ಟಿ, ದೇಜಮ್ಮ ಪೂಜಾರ್ತಿ ದಿಡ್ಡು,
ಶ್ರೀ ಕ್ಷೇತ್ರ ದಿಡ್ಡು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರುಕ್ಕಯ್ಯ ಪೂಜಾರಿ ಅಳಿಯೂರು, ಗೌರವಾಧ್ಯಕ್ಷರುಗಳಾದ ಉಮೇಶ್ ಜಿ ಸಪಲಿಗ ಮಧುವನಗಿರಿ, ಚಂದ್ರಹಾಸ ಶೆಟ್ಟಿ ಕಿಟ್ಟುಬೆಟ್ಟು ದೊಡ್ಡಮನೆ,ನಾಗೇಶ್ ಅಮೀನ್ ಬಿಯಂದಕೋಡಿ, ಪದಾಧಿಕಾರಿಗಳಾದ ಸತೀಶ್ ಪೂಜಾರಿ ತಂಗಿಲ, ನವೀನ್ ಪೂಜಾರಿ ಕಿಟ್ಟುಬೆಟ್ಟು, ಬಬಿತ ಉಮೇಶ್ ಸಪಲಿಗ, ಧನಂಜಯ ನಾಯಕ್ ಪಂಜ, ಧರ್ಮಣ ಪೂಜಾರಿ ಕುಕ್ಕಿಮಾರ್, ನಾಗೇಶ್ ನಾಯಕ್ ಪಂಜ, ರಾಮಕೃಷ್ಣ ಪೆಜತ್ತಾಯ ಕುತ್ಯಾಡಿ, ಬಾಲಚಂದ್ರ ಶೆಟ್ಟಿ ಕುತ್ಯಾಡಿ, ಸೋಮಶೇಖರ ಕೋಟ್ಯಾನ್ ಅಣ್ಣುಕೋಡಿ,ದಿವಾಕರ ಪ್ರಭು ನಡುಬಾಳಿಕೆ ಊರ-ಪರವೂರ ಭಕ್ತರು ಈ ಸಂದರ್ಭದಲ್ಲಿದ್ದರು
0 Comments