ಮೂಡುಬಿದಿರೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌ ವಿಜಯೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌ ವಿಜಯೋತ್ಸವ



ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ  ವಿಜಯ ಸಾಧಿಸಿ ಶಾಸಕರಾಗಿರುವ ಉಮಾನಾಥ ಎ. ಕೋಟ್ಯಾನ್ ಅವರ ವಿಜಯೋತ್ಸವ ಮೆರವಣಿಗೆಯು ಶನಿವಾರ ನಡೆಯಿತು.

 ಕಾರ್ಯಕರ್ತರನ್ನೊಳಗೊಂಡ ವಿಜಯೋತ್ಸವ ಮೆರವಣಿಗೆಯು ಮೂಡುಬಿದಿರೆ ಸ್ವರಾಜ್ಯ ಮೈದಾನದಿಂದ ಆರಂಭಗೊಂಡ ರಿಂಗ್ ರೋಡ್ ಮೂಲಕ ಆಲಂಗಾರು, ಬೆಳುವಾಯಿಅಭಿಮಾನಿಗಳೆಲ್ಲಾ ಸೇರಿ ಕೋಟ್ಯಾನ್ ಅವರಿಗೆ ಮಲ್ಲಿಗೆ ಹಾರ ಹಾಕಿ, ಪೇಟ, ಶಾಲು ಹೊದಿಸಿ ಅಭಿನಂದನೆಯನ್ನು ತಿಳಿಸಿದರು.  ಮೂಡುಬಿದಿರೆ ಸ್ವರಾಜ್ಯ ಮೈದಾನದಿಂದ ಆರಂಭಗೊಂಡು ಅಲಂಗಾರು , ಬೆಳುವಾಯಿ, ಅಳಿಯೂರು,ಶಿರ್ತಾಡಿ, ಮೂಡುಬಿದಿರೆ, ಸಂಪಿಗೆ ನಿಡ್ಡೋಡಿ ಮೂಲಕ ಕಟೀಲುಗೆ ಸಾಗಿತು.



ಬಿಜೆಪಿ ಮುಖಂಡರಾದ ಜಿಲ್ಲಾ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಮಂಡಲ ಅಧ್ಯಕ್ಷ ಸುನಿಲ್ ಆಳ್ವ ಮುಲ್ಕಿ, ರಮನಾಥ ಅತ್ತಾರ್, ಎಂ.ಎಸ್.ಕೋಟ್ಯಾನ್, ಎಂ.ಬಾಹುಬಲಿ ಪ್ರಸಾದ್, ಭುವನಾಭಿರಾಮ ಉಡುಪ, ಮೇಘನಾಥ ಶೆಟ್ಟಿ, ಈಶ್ವರ ಕಟೀಲು, ಕಸ್ತೂರಿ ಪಂಜ, ಲಕ್ಷ್ಮಣ್ ಪೂಜಾರಿ, ಗೋಪಾಲ ಶೆಟ್ಟಿಗಾರ್, ಕೇಶವ ಕರ್ಕೇರಾ, ಪುರಸಭಾ ನಿರ್ಗಮನ ಅಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ ಶಶಿಧರ್, ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್, ಸೌಮ್ಯ ಶೆಟ್ಟಿ, ದಿವ್ಯಾ ಜಗದೀಶ್, ಶ್ವೇತಾ ಕುಮಾರಿ, ನಾಮನಿರ್ದೇಶಿತ ಸದಸ್ಯರಾದ ಗಿರೀಶ್ ಕುಮಾರ್, ರಾಘವ ಹೆಗ್ಡೆ ಉದ್ಯಮಿ ರಂಜಿತ್ ಪೂಜಾರಿ, ಶಿರ್ತಾಡಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿವ್ಯ ವರ್ಮ ಬಲ್ಲಾಳ್ ಮತ್ತಿತರ ಕಾರ್ಯಕರ್ತರು ಭಾಗವಹಿಸಿದ್ದರು.

Post a Comment

0 Comments