ಪುಚ್ಚಮೊಗರು ಅಣೆಕಟ್ಟಿನಲ್ಲಿ ಬರಿದಾಗುತ್ತಿದೆ ಜೀವಜಲ..!
* ಪುರಸಭಾ ವ್ಯಾಪ್ತಿಯಲ್ಲಿ ನೀರಿಗಾಗಿ ಹಾಹಾಕಾರ
ಮೂಡುಬಿದಿರೆ: ಬಿಸಿಲಿನ ಬೇಗೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ನೀರಿನ ಒರತೆಯ ಕೊರತೆ ಹೆಚ್ಚುತ್ತಿದೆ. ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಜೀಲಜಲವಾಗಿರುವ ಪುಚ್ಚಮೊಗರು ಪಲ್ಗುಣಿ ಅಣೆಕಟ್ಟಿನಲ್ಲಿ ಜಲಧಾರೆಯು ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು ಜನರು ನೀರಿಗಾಗಿ ಹಾಹಾಕಾರ ಹಾಕುವಂತ್ತಾಗಿದೆ.
ಕಳೆದ ವರ್ಷ ಮಾಚ್೯ ತಿಂಗಳಿನಲ್ಲಿಯೇ ವರುಣ ದೇವ ಕರುಣೆ ತೋರಿದ್ದರಿಂದ ನೀರಿನ ಸಮಸ್ಯೆ ಕಂಡು ಬಂದಿರಲಿಲ್ಲ. ಆದರೆ ಈ ಬಾರಿ ಮಳೆರಾಯನ ಆಗಮನ ಇನ್ನೂ ಆಗಿಲ್ಲದಿರುವುದರಿಂದ ಜಲಕ್ಷಾಮ ತಲೆದೂರಿದೆ.
ನೀರಿನ ಸಮಸ್ಯೆಯು ಕಾಡುತ್ತದೆ ಎಂದು ಪುರಸಭೆಯು ಈ ಮೊದಲೇ ಅರಿತು ಕಳೆದ ಮೂರು ತಿಂಗಳಿನಿಂದ ಎರಡು ದಿನಗಳಿಗೊಮ್ಮೆ ನೀರು ಬಿಡುವ ಯೋಜನೆಯನ್ನು ಹಾಕಿಕೊಂಡಿತ್ತು. ಇತ್ತ ಮೂಡುಬಿದಿರೆಯಲ್ಲಿರುವ ಬೋರ್ವೆಲ್ಗಳ ಸ್ಥಿತಿಗತಿ, ನೀರಿನ ಒರತೆಯ ಪ್ರಮಾಣವೂ ಕುಸಿಯುತ್ತಿರುವುದರಿಂದ ಪುರಸಭೆಯು ಆತಂಕಕ್ಕೆ ಒಳಗಾಗಿದೆ. ಅಣಿಕಟ್ಟಿನ ಒಳ ಗೋಚರಿಸುತ್ತಿರುವ ಮರಳ ರಾಶಿ ಪರಿಸ್ಥಿತಿ ಚೆನ್ನಾಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಇದಲ್ಲದೆ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿರುವ ಜನರು ಕೂಡಾ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದಾರೆ.
ಬೋರ್ವೆಲ್ಗಳ ಸ್ಥಿತಿಗತಿ:
ಮಾಹಿತಿ ಪ್ರಕಾರ ಪುರಸಭೆಯಲ್ಲಿ ಕಾರ್ಯಾಚರಿಸುತ್ತಿರುವ ಸ್ಥಿತಿಯಲ್ಲಿ ೧೭೮ ಬೋರ್ವೆಲ್ಗಳವೆ. ಹತ್ತರಲ್ಲಿ ಕೆಸರು ತುಂಬಿದೆ. ಇನ್ನು ೪ ಬೋರ್ವೆಲ್ಗಳು ಪೊಟ್ಟಾಗಿವೆ.
ಪುರಸಭೆಯ ಕೆಲವು ವಾಡ್೯ ಗಳಲ್ಲಿ ಬೋರ್ ವೆಲ್ ಕೊರೆಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಸಮಸ್ಯೆ ಏನೆಂದರೆ ಇದೀಗ ಪುರಸಭೆಯಲ್ಲಿ ಎಂಜಿನಿಯರ್ ಇಲ್ಲ, ಅಲ್ಲದೆ ಅಧಿಕಾರಿಗಳು ಕೂಡಾ ಚುನಾವಣಾ ಕರ್ತವ್ಯದಲ್ಲಿದ್ದಾರೆ.
ಪುರಸಭಾ ವ್ಯಾಪ್ತಿಯ ಕೆಲವು ವಾಡ್ ೯ಗಳಲ್ಲಿ ಸದಸ್ಯರು ಜನರಿಗೆ ಕುಡಿಯುವ ನೀರನ್ನು ಒದಗಿಸಲು ಶ್ರಮಿಸುತ್ತಿದ್ದಾರೆ.
ಬೋರ್ ವೆಲ್ ಗಳಲ್ಲಿಯೂ ನೀರು ಆಳಕ್ಕೆ ಹೋಗಿರುವುದರಿಂದ ಬೋರ್ ವೆಲ್ ಗಳಿಗೆ ರಿಚಾಜ್ ೯ ಮಾಡುವ ಅಗತ್ಯವಿದೆ. ಮೂಡುಬಿದಿರೆ ಆಲಂಗಾರಿನಲ್ಲಿ ಆಶ್ರಯ ಕಾಲನಿಯಲ್ಲಿ ಬೋರ್ ವೆಲ್ ಗಳಿಗೆ ರಿಚಾಜ್ ೯ ಮಾಡಿರುವುದರಿಂದ ನೀರಿನ ಸಮಸ್ಯೆ ಅಷ್ಟೇನೂ ಕಂಡು ಬರುತ್ತಿಲ್ಲ.ಮುಂದಿನ ದಿನಗಳಲ್ಲಿ ಪುರಸಭೆಯು ಈ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ ಒಳಿತಾಗಬಹುದು.
ವಿವಿಧ ಪಕ್ಷಗಳಿಗೆ ತಟ್ಟಿದ ನೀರಿನ ಬಿಸಿ : ಇದೀಗ ಚುನಾವಣೆಯ ದಿನಗಳು ಹತ್ತಿರ ಬರುತ್ತಿದೆ. ವಿವಿಧ ಪಕ್ಷಗಳ ರಾಜಕರಣಿಗಳು ಮತ್ತು ಪಕ್ಷದ ಕಾರ್ಯಕರ್ತರು ಮತವನ್ನು ಯಾಚಿಸಲು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭ ಮತದಾರರು ನೀರಿನ ಸಮಸ್ಯೆಯ ಬಗ್ಗೆ ಮಾತನಾಡಿ ಬಿಸಿ ಮುಟ್ಟಿಸುವ ಘಟನೆಯೂ ನಡೆದಿದೆ.
ನೀರಿನ ಸಮಸ್ಯೆ ತುಂಬಾ ಕಾಡುತ್ತಿದೆ. ಪುಚ್ಚಮೊಗರು ಅಣೆಕಟ್ಟಿನಲ್ಲಿ ನೀರು ಬತ್ತಿ ಹೋಗಿದೆ. ಹೆಚ್ಚು ನೀರಿನ ಸಮಸ್ಯೆ ಇರುವಲ್ಲಿ ಯಾರಾದರೂ ಪೋನ್ ಕರೆ ಮಾಡಿದರೆ ಪುರಸಭೆಯ ಟ್ಯಾಂಕರ್ ಮೂಲಕ ನೀರನ್ನು ಒದಗಿಸಲಾಗುತ್ತಿದೆ. ಕೆಲವು ಹೊಸ ಬೋರ್ವೆಲ್ ತೋಡಲು ಟೆಂಡರ್ ಸಮಸ್ಯೆಯಿದೆ ಆದರೆ, ಈಗಿನ ಸ್ಥಿತಿಯಲ್ಲಿ ಕೆಲವು ವಿಷಯಗಳಲ್ಲಿ ಜಿಲ್ಲಾಕಾರಿಗಳ ಒಪ್ಪಿಗೆ ಪಡೆದು ತುರ್ತು ಕಾರ್ಯಾಚರಣಿ ಮಾಡಬೇಕಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಮಾಡಲಾಗಿದ್ದು ಇನ್ನೆರಡು ದಿನಗಳಲ್ಲಿ ಸೂಚನೆ ಬರಬಹುದು ಎಂದು ಮೂಡುಬಿದಿರೆ ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ ಶಿವ ನಾಯ್ಕ್ ತಿಳಿಸಿದ್ದಾರೆ.
0 Comments