ಗರಿಗೆದರಿದ ಚುನಾವಣಾ ಕಣ:ಸಾಮಾಜಿಕ ಮುಂದಾಳು, ಕಾಂಗ್ರೆಸ್ ಬೆಂಬಲಿತ ಮಾಜಿ ಪಂಚಾಯತ್ ಸದಸ್ಯೆ, ಶಿಕ್ಷಣ ಧುರೀಣ ಬಿಜೆಪಿ ಸೇರ್ಪಡೆ

ಜಾಹೀರಾತು/Advertisment
ಜಾಹೀರಾತು/Advertisment

 ಗರಿಗೆದರಿದ ಚುನಾವಣಾ ಕಣ:ಸಾಮಾಜಿಕ ಮುಂದಾಳು, ಕಾಂಗ್ರೆಸ್ ಬೆಂಬಲಿತ ಮಾಜಿ ಪಂಚಾಯತ್ ಸದಸ್ಯೆ, ಶಿಕ್ಷಣ ಧುರೀಣ ಬಿಜೆಪಿ ಸೇರ್ಪಡೆ



ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಮೂಡುಬಿದಿರೆಯ ವಾಲ್ಪಾಡಿ ಶಕ್ತಿಕೇಂದ್ರ ಸಭೆಯು ಅಳಿಯೂರಿನಲ್ಲಿ ನಡೆದಿದ್ದು ಶಾಸಕರ ಸಮ್ಮುಖದಲ್ಲಿ ಅನೇಕ ಪ್ರಮುಖರು ಭಾರತೀಯ ಜನತಾ ಪಾರ್ಟಿಯನ್ನು ಸೇರ್ಪಡೆಗೊಂಡರು.





ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿ ಅನನ್ಯ ಜವಬ್ದಾರಿ ನಿರ್ವಹಿಸುತ್ತಿರುವ ಅಳಿಯೂರಿನ ವಿಶ್ವನಾಥ ಕೋಟ್ಯಾನ್ ರವರು ತಮ್ಮ ಹಿತೈಷಿಗಳೊಂದಿಗೆ ಭಾರತೀಯ ಜನತಾ ಪಾರ್ಟಿಯನ್ನು ಸೇರ್ಪಡೆಗೊಂಡರು. 


ವಾಲ್ಪಾಡಿ ಗ್ರಾಮ ಪಂಚಾಯತಿ ಮಾಜಿ ಸದಸ್ಯೆ (ಕಾಂಗ್ರೆಸ್ ಬೆಂಬಲಿತೆ) ಶ್ರೀಮತಿ ಲೀಲಾ, ಸಾಮಾಜಿಕ ವಲಯ ಹಾಗೂ ಸಂಘಟನಾ ಜವಬ್ದಾರಿ ವಹಿಸಿರುವ ನವೀನ್ ಚಂದ್ರ ಹಾಗೂ ಅಳಿಯೂರು ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿಂದ್ರ ರವರು ಬಿಜೆಪಿ ಸೇರ್ಪಡೆಗೊಂಡರು.


ವಿಶ್ವನಾಥ್ ಕೋಟ್ಯಾನ್ ಹಾಗೂ ನವೀನ್ ಚಂದ್ರ ರವರು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾ ಮಟ್ಟದ ಜವಬ್ದಾರಿ ಹೊಂದಿದ್ದು ಕೆಲ ಕಾಲದಿಂದ ಪಕ್ಷದಲ್ಲಿ ಅಷ್ಟಾಗಿ ಸಕ್ರಿಯರಾಗಿರಲಿಲ್ಲ. ಅಳಿಯೂರಿನಲ್ಲಿ ಸರ್ಕಾರಿ ಪಿಯು ಕಾಲೇಜು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮೂಲಭೂತ ಸೌಕರ್ಯಗಳಿಗೆ ಶಾಸಕರು ವಿಶೇಷ ಒತ್ತು ನೀಡಿದ್ದು ಬಿಜೆಪಿ ಸೇರ್ಪಡೆಗೆ ಕಾರಣ ಎಂದು ಹೇಳಿದ್ದಾರೆ.

Post a Comment

0 Comments