*ವೈಭವದಿಂದ ಸಂಪನ್ನಗೊಂಡಿತ್ತು ಸಂಸೆ ಜಾತ್ರೆ*
ಕಳಸ: ಸಂಸೆ ಶ್ರೀ ಪದ್ಮಾವತಿ ಹಾಗೂ ಶ್ರೀ ವರಮಹಾಲಕ್ಷ್ಮಿ ಅಮ್ಮನವರ ಮತ್ತು ಬ್ರಹ್ಮಯಕ್ಷಾ ದೇವರ ಸನ್ನಿಧಿಯಲ್ಲಿ ನಡೆಯುವ ವಾರ್ಷಿಕ ಜಾತ್ರ ಮಹೋತ್ಸವ 10 ದಿನಗಳ ಕಾಲ ವೈಭವದಿಂದ ಜರಗಿತು.
ಇಂದ್ರ ಪ್ರತಿಷ್ಠೆ, ತೋರಣ ಮುರ್ಹೂರ್ತ, ಶ್ರೀ ಬಹ್ಮಯಕ್ಷ ಆರಾಧನೆ, ಶಾಂತಿಚಕ್ರ ಆರಾಧನೆ, ಕಲಿಕುಂಡ ಯಂತ್ರಾರಾಧನೆ, ಶ್ರೀ ಬಲಿ ಉತ್ಸವ, ಶ್ರೀ ಬ್ರಹ್ಮದೇವರ ದಿಂಡಿ ಉತ್ಸವ, ದೊಡ್ಡ ರಥಾರೋಹಣ, ರಥೋತ್ಸವ, ಕಟ್ಟೆ ಪೂಜೆ, ಉಯ್ಯಾಲೆ ಉತ್ಸವ, ಸಮವಸರಣ ಪೂಜೆ, ಮೆರವಣಿಗೆ, ತುಲಭಾರ ಸೇವೆ, ಧರ್ಮದೈವಗಳ ಹಾಗೂ ಶ್ರೀ ದೇವರಗಳ ಬೇಟಿ, ಲಾಲಿಕೆ, ಜೋಡು ಪಲ್ಲಕ್ಕಿಗಳ ಉತ್ಸವ , ಧರ್ಮದೈವಗಳ ನೇಮೋತ್ಸವ ವಂಸತ ಪೂಜಾದಿ ಮಹೋತ್ಸವಗಳು ಸಕಲ ವೈಭವದಿಂದ ಜರಗಿತು. ಊರ ಹಾಗೂ ಪರ ಊರಿನ ಭಕ್ತವೃಂದವರು ಸಹಸ್ರಾರುಸಂಖ್ಯೆಯಲ್ಲಿ ಭಾಗವಹಿಸಿದ್ದರು
0 Comments