ಮೂಡುಬಿದಿರೆ ಪ್ರಶಾಂತ್ ಪೂಜಾರಿ ಹತ್ಯೆಗೀಡಾಗಿ ಹತ್ತು ವರ್ಷ-ಪ್ರಶಾಂತ್ ಮನೆಗೆ ನಳಿನ್ ಕುಮಾರ್ ಭೇಟಿ-ಅಕ್ಕಿ,ದಿನಸಿ ವಿತರಣೆ
ಮೂಡುಬಿದಿರೆ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿ ಹತ್ತು ವರ್ಷಗಳಾಗಿದ್ದು ಹತ್ತನೇ ವರ್ಷದ ಸ್ಮರಣೆಯ ಅಂಗವಾಗಿ ಇಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲು ಪ್ರಶಾಂತ್ ಪೂಜಾರಿ ಮನೆಗೆ ಆಗಮಿಸಿ ಆತನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುಮಾರು ಆರು ತಿಂಗಳಿಗೆ ಆಗುವಷ್ಟು ಅಕ್ಕಿ ಹಾಗೂ ದಿನಸಿ ಸಾಮಗ್ರಿಗಳನ್ನು ಕುಟುಂಬಕ್ಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ, ಪುತ್ತೂರು ಮಾಜಿ ಶಾಸಕರಾದ ಸಂಜೀವ ಮಠಂದೂರು, ಬಿಜೆಪಿ ಮುಖಂಡರಾದ ಕೆಪಿ ಜಗದೀಶ್ ಅಧಿಕಾರಿ, ಗೋಪಾಲ್ ಶೆಟ್ಟಿಗಾರ್, ದಿವ್ಯವರ್ಮ ಬಳ್ಳಾಲ್, ಅಶ್ವತ್ ಪಣಪಿಲ, ಬಿರಾವು ಗ್ರಾಮ ಬಿಜೆಪಿ ಪ್ರಮುಖರಾದ ಬಾಲಕೃಷ್ಣ, ಬೂತ್ ಸಮಿತಿ ಅಧ್ಯಕ್ಷ ದಿವಾಕರ್, ಮೃತ ಪ್ರಶಾಂತ್ ಪೂಜಾರಿ ತಾಯಿ, ಸಹೋಹದರಿ ಸೇರಿದಂತೆ ಕುಟುಂಬಸ್ಥರು ಹಾಗೂ ಇತರೆ ಪ್ರಮುಖರು ಉಪಸ್ಥಿತರಿದ್ದರು.
0 Comments