ವಿಶ್ವ ವಿದ್ಯಾನಿಲಯ ಕಾಲೇಜು ಬನ್ನಡ್ಕ ಇಲ್ಲಿ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆಯನ್ನು ನಡೆಸಲಾಯಿತು. ಈ ದಿನಾಚರಣೆಯ ಪ್ರಯುಕ್ತ ಮುಖ್ಯ ಅತಿಥಿಯಾಗಿ ಡಾ.ರಾಯಿ ರಜತ್ ಕುಮಾರ್ ಇವರು ವಿದ್ಯಾರ್ಥಿಗಳಿಗೆ ಆರೋಗ್ಯಕರ ಜೀವನ ಕ್ರಮದ ಸೂತ್ರಗಳು ಎಂಬ ವಿಷಯದ ಕುರಿತು ಮಾಹಿತಿಯನ್ನು ನೀಡಿದರು. ಉತ್ತಮ ಆರೋಗ್ಯಕ್ಕಾಗಿ ಪಾಲಿಸಬೇಕಾದ ದಿನಚರಿ, ಆರೋಗ್ಯ ಪದ್ಧತಿ, ಆರೋಗ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಜೀವನದಲ್ಲಿ ಆರೋಗ್ಯಕ್ಕೋಸ್ಕರ ಡಾಕ್ಟರನ್ನು ನಂಬುವ ಮೊದಲು ನಿಮ್ಮ ದೇಹವನ್ನು ನಂಬಿದರೆ ಉತ್ತಮ ಎಂದು ಹೇಳಿದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ ಶಶಿಕಲಾ ಎನ್ ಹಾಗೂ ರೆಡ್ ಕ್ರಾಸ್ ಘಟಕದ ಯೋಜನಾಧಿಕಾರಿ ಕುಮಾರಿ ಪುಷ್ಪಲತಾ ಹಾಗೂ ಘಟಕದ ಕಾರ್ಯದರ್ಶಿಯಾದ ರಚನಾ ಹಾಗೂ ಸಹಕಾರ್ಯದರ್ಶಿಯಾದ ರಕ್ಷಿತ್ ಇವರು ಉಪಸ್ಥಿತರಿದ್ದರು. ವಿದ್ಯಾರ್ಥಿ ರಚನಾ ನಿರೂಪಿಸಿದರು. ವರ್ಷಿತ ಸ್ವಾಗತಿಸಿದರು. ಸುರಕ್ಷ ವಂದಿಸಿದರು.
0 Comments