ನಿರೀಕ್ಷೆ ಉಲ್ಟಾಪಲ್ಟಾ ಮಾಡಿದ ಪಣಪಿಲ ಕಂಬಳ:ಹೊಸ ಕರೆಯಲ್ಲಿ ಹೊಸ ದಾಖಲೆ
ಮೂಡಬಿದಿರೆಯ ಪಣಪಿಲದಲ್ಲಿ ಜಯ-ವಿಜಯ ಜೋಡುಕರೆ ಕಂಬಳ ಸಂಪನ್ನಗೊಂಡಿದ್ದು ವೈಭವದಿಂದ ಈ ಕಂಬಳ ಕಾರ್ಯಕ್ರಮ ನಡೆದಿದೆ.
ಈ ಬಾರಿ ಹದಿಮೂರನೇ ವರ್ಷದ ಕಂಬಳ ಆಯೋಜನೆ ಮಾಡಿದ್ದರೂ ಕೂಡ ಹೊಸ ಜಾಗದಲ್ಲಿ ಕಂಬಳ ನಡೆಸುವುದರಿಂದ ಹಲವಾರು ಗೊಂದಲ ಹಾಗೂ ಊಹಾಪೋಹಗಳಿಗೆ ಕಾರಣವಾಗಿತ್ತು. ಆದರೆ ಎಲ್ಲಾ ಅಡೆತಡೆಗಳನ್ನು ಮೀರಿ ಪಣಪಿಲ ಕಂಬಳ ವೈಭವದಿಂದ ತೆರೆ ಕಂಡಿದೆ.
ದೊಡ್ಡ ಕೋಣಗಳಿಗೆ ಅವಕಾಶ ನೀಡದೆ ಇದ್ದ ಕಾರಣ ಕಂಬಳಕ್ಕೆ ನೀರಸ ಪ್ರತಿಕ್ರಿಯೆ ಬರಬಹುದು ಎಂಬ ಚರ್ಚೆಗಳಿದ್ದವು. ಆದರೆ 150ಕ್ಕೂ ಅಧಿಕ ಜೊತೆ ಕೋಣಗಳ ಸ್ಪರ್ಧೆಯಿಂದ ಕಂಬಳ ನಡೆದಿದೆ. ಬೆಳಿಗ್ಗೆ ಮುಗಿಯಬಹುದು ಎಂದು ಅಂದಾಜಿಸಲಾಗಿದ್ದ ಕಂಬಳ ಸಂಜೆಯವರೆಗೂ ಮುಂದುವರಿದಿತ್ತು. ದೊಡ್ಡ ಕಂಬಳಕ್ಕೆ ಸಿಕ್ಕ ಎಲ್ಲಾ ಜನ ಸ್ಪಂದನೆ ಪಣಪಿಲ ಕಂಬಳಕ್ಕೂ ಸಿಕ್ಕಿದ್ದು ಸಮಿತಿಯ ಲೆಕ್ಕಾಚಾರ ಉಲ್ಟಾಪಲ್ಟ ಮಾಡಿದೆ.
ಉತ್ತಮ ಪಾರ್ಕಿಂಗ್ ನಿರ್ವಹಣೆ, ನೀರಿನ ವ್ಯವಸ್ಥೆ, ಆಸನದ ವ್ಯವಸ್ಥೆ ಹೀಗೆ ಎಲ್ಲಾ ವಿಚಾರದಲ್ಲೂ ಅಚ್ಚುಕಟ್ಟಾದ ವ್ಯವಸ್ಥೆ ಪಣಪಿಲ ಕಂಬಳದಲ್ಲಿ ಕಂಡುಬಂದಿದ್ದು ಅತ್ಯಂತ ಯಶಸ್ವಿಯಾಗಿ ಕಂಬಳ ಸಂಪನ್ನಗೊಂಡಿದೆ.
0 Comments