ಮೂಡುಬಿದಿರೆ ಪ್ರಭಾತ್ ಸಿಲ್ಕ್ಸ್ ನ ವೀಡಿಯೋ ಜಾಹೀರಾತು ಅನಾವರಣ
ಮೂಡುಬಿದಿರೆ : ಕಳೆದ 47 ವರ್ಷಗಳಿಂದ ಜವುಳಿ ಉದ್ಯಮವನ್ನು ನಡೆಸಿಕೊಂಡು ಬಂದಿರುವ ಮೂಡುಬಿದಿರೆಯ ಪ್ರಭಾತ್ ಸಿಲ್ಕ್ಸ್ ನ ವೀಡಿಯೋ ಜಾಹೀರಾತನ್ನು ತುಳು ನಾಟಕ ಕಲಾವಿದ ತೆಲಿಕೆದ ಬೊಳ್ಳಿ ಡಾ.ದೇವದಾಸ ಕಾಪಿಕಾಡ್ ಅವರು ಶುಕ್ರವಾರ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು ನಾನು ಬೆಳೆಯಬೇಕು ನನ್ನ ಜೊತೆ ಇರುವವರು ಕೂಡಾ ಬೆಳೆಯಬೇಕೆಂಬ ನಿರ್ಮಲವಾದ ಮನಸ್ಸನ್ನು ಯಾರು ಹೊಂದಿರುತ್ತಾರೋ ಅವರು ಅಭಿವೃದ್ಧಿಯನ್ನು ಹೊಂದುತ್ತಾರೆ ಅಂತವರಲ್ಲಿ ಪ್ರಭಾತ್ ಸಿಲ್ಕ್ಸ್ ನ ಪ್ರವರ್ತಕರಾದ ಪ್ರಭಾತ್ ಚಂದ್ರರೂ ಒಬ್ಬರು.
ಮಳಿಗೆಗಳಿಗೆ ಗ್ರಾಹಕರು ಬಂದಾಗ ಅವರಿಗೆ ನಗು ಮೊಗದ ಮತ್ತು ಗುಣಮಟ್ಟದ ಸೇವೆಯನ್ನು ನೀಡಿದಾಗ ಗ್ರಾಹಕರ ಸಂಖ್ಯೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದ ಅವರು ಉತ್ತಮ ಸೇವೆಯೊಂದಿಗೆ ಮಳಿಗೆಗಳ ಸಂಖ್ಯೆಯೂ ಹೆಚ್ಚಾಗುವ ಮೂಲಕ ಇನ್ನೂ ಅಭಿವೃದ್ಧಿಯನ್ನು ಹೊಂದುವಂತ್ತಾಗಲಿ ಎಂದು ಶುಭ ಹಾರೈಸಿದರು.
ಜಾಹೀರಾತಿನ ನಿರ್ಮಾಪಕ ಹಬೀಬ್ ಬಾಬು ಎಲ್ಲನ್ನೂರು ಭಾಗವಹಿಸಿ ಮಾತನಾಡಿದರು. ಪ್ರಭಾತ್ ಸಿಲ್ಕ್ಸ್ ನ ಪಾಲುದಾರ ಪ್ರತಾಪ್ ಚಂದ್ರ ಉಪಸ್ಥಿತರಿದ್ದರು.
ಪ್ರಭಾತ್ ಸಿಲ್ಕ್ಸ್ ನ ಪ್ರವರ್ತಕ ಪ್ರಭಾತ್ ಚಂದ್ರ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ಬೆಳೆದು ಬಂದ ದಾರಿಯ ಬಗ್ಗೆ ತಿಳಿಸಿದರು. ಸೌಮ್ಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಇನ್ನೋರ್ವ ಪಾಲುದಾರ ಪೂರ್ಣಚಂದ್ರ ಜೈನ್ ವಂದಿಸಿದರು.
0 Comments