ನಮ್ಮ ಬೆಂಬಲ ಯಾವತ್ತಿಗೂ ಬಿಜೆಪಿಗೆ:ಸುಳ್ಳು ಸುದ್ಧಿಯ ವಿರುದ್ಧ ಭಜರಂಗದಳ ಸಂಚಾಲಕ ದೂರು
ಖಾಸಗಿ ವೆಬ್‌ಸೈಟ್ ಒಂದು ಶಾಸಕ ಉಮನಾಥ್ ಕೋಟ್ಯಾನ್ ರವರ ವಿರುದ್ಧ ಅಸಮಾಧಾನಗೊಂಡು ಭಜರಂಗದಳ ಮೂಡುಬಿದಿರೆ ಪ್ರಖಂಡದ ಸಂಚಾಲಕ ಅಭಿಲಾಶ್ ಅರ್ಜುನಾಪುರ ರವರು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಮಾಡಿದ್ದು ಈ ಸುದ್ಧಿ ಸತ್ಯಕ್ಕೆ ದೂರವಾಗಿದೆ ಎಂದು ಅಭಿಲಾಶ್ ಅರ್ಜುನಾಪುರ ರವರು ತಿಳಿಸಿದ್ದಾರೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಈ ಅಪರಿಚಿತ ವೆಬ್‌ಸೈಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಭಜರಂಗದಳ ಸಂಚಾಲಕ ಅಭಿಲಾಶ್ ಅರ್ಜುನಾಪುರ "ಪ್ರತಿಬಿಂಬ ಎಂಬ ವೆಬ್‌ಸೈಟ್ ನಮ್ಮ ಬಗ್ಗೆ ಸುಳ್ಳು ಸುದ್ಧಿಯನ್ನು ಪ್ರಸಾರ ಮಾಡಿದೆ. ಇಂತಹ ಯಾವುದೇ ಬೆಳವಣಿಗೆಗಳೂ ನಡೆದಿಲ್ಲ. ಇದರ ಹಿಂದೆ ಕಾಣದ "ಕೈ"ಗಳ ಕೈವಾಡವಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ದೂರು ನೀಡಿದ್ದೇವೆ. ಹಿಂದೂಗಳ ರಕ್ಷಣೆಗಾಗಿ ಬಿಜೆಪಿ ಸರ್ಕಾರದ ಅಗತ್ಯವಿದೆ. ಮೂಡುಬಿದಿರೆಯಲ್ಲೂ ನಮ್ಮ ಬೆಂಬಲ ಬಿಜೆಪಿ ಅಭ್ಯರ್ಥಿ ಉಮನಾಥ್ ಕೋಟ್ಯಾನ್ ರವರಿಗಿದೆ" ಎಂದು ಹೇಳಿದ್ದಾರೆ.
0 Comments