ಮೂಡುಬಿದಿರೆಯಲ್ಲಿ ಕಾಂಗ್ರೆಸ್ ಯುವ ಸಮ್ಮಿಲನ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ಕಾಂಗ್ರೆಸ್ ಯುವ ಸಮ್ಮಿಲನ




 ಮೂಡುಬಿದಿರೆ: ಇಲ್ಲಿನ ಸ್ಕೌಟ್ ಗೈಡ್ಸ್ ಕನ್ನಡ ಭವನದಲ್ಲಿ ಭಾನುವಾರ ಕಾಂಗ್ರೆಸ್ ವತಿಯಿಂದ ಯುವ ಸಮ್ಮಿಲನ ನಡೆಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮಾತನಾಡಿ ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿ ಬಿಜೆಪಿಯು ಹಿಂದೂ ಮುಸ್ಲಿಂ ನಡುವೆ ತಾರತಮ್ಯ ಮಾಡಿದೆ. ಇರುವೈಲು ದೇವಸ್ಥಾನದ ಉತ್ಸವ ಸಂದರ್ಭ ಬಲಿ ಸೇವೆ ಅರ್ಧದಲ್ಲಿ ನಿಲ್ಲಿಸಲಾಗಿದೆ. ಕಡಂದಲೆ ಕೃಷಿ ಪ್ರಧಾನ ಜಾಗದಲ್ಲಿ ಪವರ್ ಗ್ರಿಡ್ ಮಾಡಿ ಅನ್ಯಾಯ ವೆಸಗಲಾಗಿದೆ. ದೆಹಲಿಯಲ್ಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಲು ನಾರಾಯಣ ಗುರುಗಳ ಟ್ಯಾಬ್ಲೋ ರಚಿಸಿ ಕೇರಳ ಕಳುಹಿಸಿ ಕೊಟ್ಟಾಗ ಕೇಂದ್ರ ಬಿಜೆಪಿ ಸರಕಾರ ಅದನ್ನು ತಿರಸ್ಕರಿಸಿತ್ತು ಎಂದು ಬಿಜೆಪಿಯ ವಿರುದ್ಧ ಹರಿಹಾಯ್ದರು. 


   ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇಡಲು ಕಾಂಗ್ರೇಸ್ ಒತ್ತಾಯಿಸಿದರೂ ಸರಕಾರ ಗಮನ ಹರಿಸಿಲ್ಲ, ಬಿಜೆಪಿ ಮುಖಂಡ ಕೆ. ಪಿ. ಜಗದೀಶ ಅಧಿಕಾರಿ ಕೋಟಿ ಚೆನ್ನಯರ ಕುರಿತು ಅವಹೇಳನ ಮಾಡಿದಾಗ ಅವರನ್ನು ಉಚ್ಚಾಟಿಸದೆ ಪಕ್ಷದಲ್ಲೇ ಮುಂದುವರೆಸುವ ಮೂಲಕ ಬಿಜೆಪಿ ಬಿಲ್ಲವರಿಗೆ ಹೆಚ್ಚಿನ ಅನ್ಯಾಯ ಮಾಡಿರುವುದಾಗಿ ಹೇಳಿದರು.


ಮೂಡುಬಿದಿರೆಯ ಮಾರ್ಕೆಟ್, ಯೂಜಿಡಿ, ಬಸ್ ಸ್ಟ್ಯಾಂಡ್ ಸಮಸ್ಯೆ ಗಳೂ ಹಾಗೇ ಉಳಿದಿದೆ. ಹಾಗಿರುವಾಗ ಅಭಿವೃದ್ಧಿ ಎಲ್ಲಿ ಎಂದು ಅವರು ಪ್ರಶ್ನಿಸಿದರು. ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ, ಮಾಜಿ ಸಚಿವ ಅಭಯಚಂದ್ರ ಜೈನ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ವಲೇರಿಯನ್, ನಗರಾಧ್ಯಕ್ಷ ಪುರಂದರ ದೇವಾಡಿಗ, ಯುವ ಕಾಂಗ್ರೇಸ್ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ, ಕೆಪಿಸಿಸಿ ಸದಸ್ಯ ಚಂದ್ರಹಾಸ ಸನಿಲ್, ಮಹಿಳಾ ಅಧ್ಯಕ್ಷೆ ಸುಪ್ರಿಯಾ, ಜಿಲ್ಲಾ ಯುವ ಕಾಂಗ್ರೇಸ್ ಉಪಾಧ್ಯಕ್ಷ ಗಿರೀಶ್ ಆಳ್ವ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ವಜೀರ್, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪಾದ್ ಪಾಣಾಜೆ, ಎಸ್ ಸಿ ಘಟಕ ಅಧ್ಯಕ್ಷ ವಿವೇಕ್ ಶಿರ್ತಾಡಿ, ಮತ್ತಿತರರು ಉಪಸ್ಥತರಿದ್ದರು. ಜಯಕುಮಾರ್ ಶೆಟ್ಟಿ ಸ್ವಾಗತಿಸಿದರು. ರಾಜೇಶ್ ಕಡಲಕೆರೆ ನಿರೂಪಿಸಿ ಇರ್ಷಾದ್ ಧನ್ಯವಾದ ವಿತ್ತರು.

Post a Comment

0 Comments