ಇರುವೈಲು ದೇವಸ್ಥಾನದಲ್ಲಿ ಬಲಿ ಸೇವೆ ಸ್ಥಗಿತ : ರಾಜಕೀಯ ಪಕ್ಷ, ವ್ಯಕ್ತಿಗಳ ಪಾತ್ರವಿಲ್ಲ : ವ್ಯವಸ್ಥಾಪನಾ ಸಮಿತಿ ಸ್ಪಷ್ಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಇರುವೈಲು ದೇವಸ್ಥಾನದಲ್ಲಿ  ಬಲಿ ಸೇವೆ ಸ್ಥಗಿತ :  ರಾಜಕೀಯ ಪಕ್ಷ, ವ್ಯಕ್ತಿಗಳ ಪಾತ್ರವಿಲ್ಲ : ವ್ಯವಸ್ಥಾಪನಾ ಸಮಿತಿ ಸ್ಪಷ್ಟನೆ



ಮೂಡುಬಿದಿರೆ : ಕಳೆದ ಮೂರು ವರ್ಷಗಳ ಹಿಂದೆ  ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ  ದೈವದ ಬಲಿ ಸೇವೆಯನ್ನು ಪೊಲೀಸರು ಅರ್ಧದಲ್ಲಿ ಸ್ಥಗಿತಗೊಳಿಸಿದ ಪ್ರಕರಣದಲ್ಲಿ ಯಾವುದೇ ರಾಜಕೀಯ ಪಕ್ಷ ಹಾಗೂ ವ್ಯಕ್ತಿಗಳ ಪಾತ್ರವಿಲ್ಲ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸ್ಪಷ್ಟಪಡಿಸಿದೆ. 


  ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಐ. ಕುಮಾರ್ ಶೆಟ್ಟಿ ಅವರು ಸೋಮವಾರ ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟಪಡಿಸಿದರು.

 

ದೇವಸ್ಥಾನದ ಆಂತರಿಕ ವಿಷಯಗಳನ್ನು ರಾಜಕೀಯ ವ್ಯಕ್ತಿಗಳು ಬಹಿರಂಗವಾಗಿ ಮಾತನಾಡಬಾರದು ಎಂದು ಅವರು ಸಲಹೆಯಿತ್ತರು.  ಶಾಸಕರಾಗಿದ್ದ ಉಮಾನಾಥ್ ಕೋಟ್ಯಾನ್‌ರವರು ದೇವಸ್ಥಾನಕ್ಕೆ ಅಭಿವೃದ್ಧಿ ಕಾರ್ಯ ನಡೆಸಲು ರೂ. 75ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿ ಸಹಕರಿಸಿರುವುದಾಗಿಯೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಸದಸ್ಯರಾದ ರಾಮಕೃಷ್ಣ ಪೆಜತ್ತಾಯ, ಪದ್ಮನಾಭ ಶೆಟ್ಟಿ, ಸೋಮಶೇಖರ ಕೋಟ್ಯಾನ್, ಶ್ರೀಮತಿ ಬಬಿತಾ, ಶ್ರೀಮತಿ ಸಪ್ನಾ ಆಚಾರ್, ವಾಸುದೇವ ಸಾಮಂತರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

0 Comments