ಇಷ್ಟು ದೊಡ್ಡ ಮನೆ ನಿರೀಕ್ಷಿಸಿರಲಿಲ್ಲ:ಹೊಸ ಮನೆಯ ಬಗ್ಗೆ ಪ್ರವೀಣ್ ನೆಟ್ಟಾರ್ ಪತ್ನಿ ಭಾವುಕ

ಜಾಹೀರಾತು/Advertisment
ಜಾಹೀರಾತು/Advertisment

 ಇಷ್ಟು ದೊಡ್ಡ ಮನೆ ನಿರೀಕ್ಷಿಸಿರಲಿಲ್ಲ:ಹೊಸ ಮನೆಯ ಬಗ್ಗೆ ಪ್ರವೀಣ್ ನೆಟ್ಟಾರ್ ಪತ್ನಿ ಭಾವುಕ




ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ನಿರ್ಮಿಸಿ ಕೊಟ್ಟ ಮನೆಯ ಬಗ್ಗೆ ಪ್ರವೀಣ್ ನೆಟ್ಟಾರ್ ಪತ್ನಿ ನೂತನ ಪ್ರವೀಣ್ ರವರು ಭಾವುಕ ಮಾತುಗಳನ್ನು ಆಡಿದ್ದಾರೆ.


"ಅಧ್ಯಕ್ಷರು ಮನೆ ಕಟ್ಟಿಸಿ ಕೊಡುವಾಗ ಸಣ್ಣ ಮನೆಯನ್ನು ಕಟ್ಟಿಸಿ ಕೊಡಬಹುದು ಎಂದುಕೊಂಡಿದ್ದೆವು. ಆದರೆ ಇಂದು ಅವರು ನಿರ್ಮಿಸಿಕೊಟ್ಟ ಮನೆಯು ನಮ್ಮ ನಿರೀಕ್ಷೆಗೂ ಮೀರಿದೆ. ಪ್ರತೀ ಉಪಕರಣವೂ ಉತ್ತಮ ಗುಣಮಟ್ಟದ್ದಾಗಿದೆ. ಮತ್ತು ಪ್ರತ್ಯೇಕವಾಗಿ ಔಟ್ ಹೌಸನ್ನೂ ನಿರ್ಮಿಸಿ ಕೊಟ್ಟಿದ್ದಾರೆ. ಇಂತಹ ಅದ್ಭುತ ಮನೆಯ ನಿರ್ಮಾಣದಲ್ಲಿ ಮುಗ್ರೋಡಿ ಸಂಸ್ಥೆ ಕೆಲಸ ಮಾಡಿದೆ. ನಮ್ಮ ಕುಟುಂಬದ ಬದುಕಿಗೆ ಆಸರೆಯಾದ ನಳಿನಣ್ಣನಿಗೆ ಧನ್ಯವಾದಗಳು" ಎಂದು ಪತ್ನಿ ನೂತನ ಹೇಳಿದ್ದಾರೆ.


ಇಂದು ಪ್ರವೀಣ್ ನೆಟ್ಟಾರ್ ಮನೆಯ ಗೃಹ ಪ್ರವೇಶ ನಡೆಯಲಿದ್ದು ಈ ಸಂದರ್ಭದಲ್ಲೇ ಪತ್ನಿ ನೂತನ ಕನಸಿನಂತೆ ಪ್ರವೀಣ್ ನೆಟ್ಟಾರ್ ಪ್ರತಿಮೆಯೂ ಅನಾವರಣಗೊಳ್ಳಲಿದೆ.

Post a Comment

0 Comments