ಕಾರ್ಯಕರ್ತರ ಹಣ ನಮ್ಮಲ್ಲೇ ಇದೆ, ಮನೆ ನಿರ್ಮಾಣದ ಸಂಪೂರ್ಣ ವೆಚ್ಚ ರಾಜ್ಯಾಧ್ಯಕ್ಷರದ್ದೇ.! ಗೊಂದಲಕ್ಕೆ ತೆರೆ ಎಳೆದ ಪ್ರವೀಣ್ ನೆಟ್ಟಾರ್ ಕುಟುಂಬ
ಮತಾಂಧ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಮನೆ ನಿರ್ಮಾಣದ ಹಿಂದೆ ಅಂದು ಕಾರ್ಯಕರ್ತರು ಸಂಗ್ರಹಿಸಿದ ಹಣ ಇದೆ. ಈ ಹಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮನೆ ಕಟ್ಟಿಸಿಕೊಡುತ್ತಿದ್ದಾರೆ ಎಂಬ ಸಾಮಾಜಿಕ ಜಾಲತಾಣಗಳ ಚರ್ಚೆಗಳಿಗೆ ಸ್ವತಃ ಪ್ರವೀಣ್ ನೆಟ್ಟಾರ್ ಕುಟುಂಬಸ್ಥರೇ ತೆರೆ ಎಳೆದಿದ್ದಾರೆ.
ಪ್ರವೀಣ್ ನೆಟ್ಟಾರ್ ಹತ್ಯೆಯ ಸಂದರ್ಭದಲ್ಲಿ ದಾನಿಗಳು ಮತ್ತು ಕಾರ್ಯಕರ್ತರಿಂದ ಸಂಗ್ರಹಿಸಲಾದ ಹಣಕ್ಕೆ ಕುಟುಂಬಸ್ಥರೇ ವಾರೀಸುದಾರರು. ಅದನ್ನು ಪಕ್ಷ ಆಗಲಿ ರಾಜ್ಯಾಧ್ಯಕ್ಷರಾಗಲಿ ಯಾವುದೇ ಕಾರ್ಯಕ್ಕೂ ಬಳಸಿಲ್ಲ. ಈಗ ನಿರ್ಮಿಸಿಕೊಟ್ಟ ಮನೆಯ ಖರ್ಚನ್ನು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ರವರೇ ಭರಿಸಿದ್ದಾರೆ. ಇದು ಅವರ ವೈಯಕ್ತಿಕ ಹಣ ಎಂದು ಕುಟುಂಬಸ್ಥರು ಗೊಂದಲಕ್ಕೆ ತೆರೆ ಎಳೆದಿದ್ದಾರೆ.
0 Comments