ತೆನೆಹೊತ್ತ ಮಹಿಳೆಗೆ ನಾಮಪತ್ರ ಸಲ್ಲಿಸಿದ ಡಾ.ಅಮರಶ್ರೀ
ಮೂಡುಬಿದಿರೆ: ವಿಧಾನ ಸಭಾ ಚುನಾವಣೆಯಲ್ಲಿ ಮೂಡುಬಿದಿರೆ ಕ್ಷೇತ್ರದಿಂದ ತೆನೆಹೊತ್ತ ಮಹಿಳೆ (ಜೆಡಿಎಸ್) ಪಕ್ಷದ ಅಭ್ಯರ್ಥಿಯಾಗಿ ಡಾ.ಅಮರಶ್ರೀ ಅಮರನಾಥ ಶೆಟ್ಟಿ ಅವರು ಗುರುವಾರದಂದು ತಾಯಿ ಜಯಶ್ರೀ ಅಮರನಾಥ ಶೆಟ್ಟಿ ಮತ್ತು ಪಕ್ಷದ ಹಿರಿಯ ಕಾರ್ಯಕರ್ತ ಹರಿಪ್ರಸಾದ್ ಶೆಟ್ಟಿ ಸಹಿತ ಪಕ್ಷದ ಕಾರ್ಯಕರ್ತರೊಂದಿಗೆ ಆಗಮಿಸಿ ಮೂಡುಬಿದಿರೆ ತಾಲೂಕು ಆಡಳಿತ ಸೌಧದಲ್ಲಿ ನಾಮಪತ್ರ ಸಲ್ಲಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಮರಶ್ರೀ ಅವರು ನಾಮಪತ್ರ ಸಲ್ಲಿಕೆಗೆ ತಾನು ಈ ಹಿಂದೆ ತಂದೆಯೊಂದಿಗೆ ಬಂದ ಅನುಭವವಿದೆ. ಇದೀಗ ತಾನೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದು ತ್ರಿಲ್ ನೀಡಿದೆ ಜತೆಗೆ ಜವಾಬ್ದಾರಿಯನ್ನು ಹೆಚ್ಚಿಸಿದೆ.ಸ್ಪಷ್ಟ ಗುರಿ, ನಿಶ್ಚಿತ ಯೋಜನೆಯೊಂದಿಗೆ ಈಗಾಗಲೇ ಮತದಾರರ ಮನೆ ಮನೆಗೆ ತೆರಳಿ, ಅಹವಾಲು ಆಲಿಸಿ, ಜನಸಂಪರ್ಕ ನಡೆಸುತ್ತಿರುವ ಅಮರಶ್ರೀ ಯವರು, ಬದಲಾವಣೆಯನ್ನು ಮುಂದಿಟ್ಟುಕೊAಡು ಚುನಾವಣೆ ಎದುರಿಸುತ್ತಿದ್ದೇನೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದ್ದೇನೆ. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಉದ್ಯೋಗ , ಮಹಿಳಾ ಸಬಲೀಕರಣ,ಆರೋಗ್ಯ, ಪ್ರವಾಸ ಹಲವು ವಿಚಾರಗಳನ್ನು ತಮ್ಮ ಚುನಾವಣಾ ಪ್ರಚಾರದಲ್ಲಿ ಜನತೆಗೆ ತಿಳಿಸುತ್ತಾ ಬಂದಿದ್ದು, ಜನಪರವಾದ ಕೆಲಸ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಮುಂದುವರಿಯುವುದಾಗಿ ತಿಳಿಸಿದರು.
ಇದಕ್ಕೂ ಮೊದಲು ತಾನು ಹುಟ್ಟಿ ಬೆಳೆದ ಮನೆ "ಆಶ್ರಿತಾ" ದಲ್ಲಿ ತಂದೆ ಅಮರನಾಥ ಶೆಟ್ಟಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮಸ್ಕರಿಸಿ ನಾಮಪತ್ರ ಸಲ್ಲಿಕೆಗೆ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಹೊರಟ ಅವರು ನಿಶ್ಮಿತಾ ಟವರ್ಸ್ ಬಳಿ ಸರ್ಕಲ್ ನಲ್ಲಿ ರುವ ಅಮರನಾಥ ಶೆಟ್ಟಿ ಅವರ ಪ್ರತಿಮೆಗೆ ಹಾರಾರ್ಪಣೆಗೈದು ತೆನೆಹೊತ್ತ ಮಹಿಳೆಯರು ಮತ್ತು ಕಾರ್ಯಕರ್ತರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
0 Comments