ಭಿನ್ನಮತದ ನಡುವೆಯೂ ಪುತ್ತೂರಿನಲ್ಲಿ ಕಮಲ ಕಮಾಲ್:ಆಶಾ ತಿಮ್ಮಪ್ಪ ನಾಮಪತ್ರ ಸಲ್ಲಿಕೆಗೆ ಹರಿದು ಬಂದ ಜನಸಾಗರ
ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಆಶಾ ತಿಮ್ಮಪ್ಪ ಗೌಡರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ಬೆನ್ನಲ್ಲೇ ಭಿನ್ನಮತ ಸ್ಪೋಟಗೊಂಡಿದ್ದು ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಪುತ್ತಿಲ್ಲ ಕಣಕ್ಕಿಳಿದಿದ್ದರು. ಇದೀಗ ಭಿನ್ನಮತದ ಬೇಗುದಿಯಲ್ಲಿ ಬೆಂದಿದ್ದ ಬಿಜೆಪಿಗೆ ಪುತ್ತೂರಿನಲ್ಲಿ ಆನೆಬಲ ಬಂದಿದೆ.
ಇಂದು ಬಿಜೆಪಿ wಅಭ್ಯರ್ಥಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಸಾಗರೋಪಾದಿಯಲ್ಲಿ ಜನ ಹರಿದು ಬಂದಿದ್ದು ಭರ್ಜರಿ ಯಶಸ್ಸು ಪಡೆದಿದೆ. ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಬಿಜೆಪಿ ನಾಯಕಿ, ಚಿತ್ರ ನಟಿ ಶ್ರುತಿ ಸಹಿತ ಅನೇಕ ಬಿಜೆಪಿ ನಾಯಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.




0 Comments