ಉಡುಪಿ ಕೃಷ್ಣ ಮಠದ ಜಾಗದ ವಿಚಾರ: ಪೇಚಿಗೆ ಸಿಲುಕಿದ ಮಿಥುನ್ ರೈ
ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಮಠ ನಿರ್ಮಿಸಲು ಜಾಗ ಕೊಟ್ಟಿದ್ದು ಮುಸ್ಲಿಂ ರಾಜರು ಎಂಬ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು ಈಗ ಕಾಂಗ್ರೆಸ್ ಮುಖಂಡ ಮಿಥುನ್ ರೈ ಈ ಹೇಳಿಕೆಯಿಂದ ಪೇಚಿಗೆ ಸಿಲುಕಿದ್ದಾರೆ. ಇತ್ತೀಚಿಗೆ ಮೂಡಬಿದ್ರೆಯ ಮಸೀದಿಯೊಂದರಲ್ಲಿ ನಡೆದ ಮಸೀದಿ ನೋಡ ಬನ್ನಿ ನಮ್ಮೂರ ಮಸೀದಿ ನೋಡ ಬನ್ನಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಿಥುನ್ ರೈ ಅನೇಕ ದೇಗುಲಗಳಿಗೆ ಮುಸ್ಲಿಂ ರಾಜರ ಉಡುಗೊರೆಗಳಿವೆ.ಅದರಲ್ಲಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಶ್ರೀ ಕೃಷ್ಣ ಮಠವನ್ನು ನಿರ್ಮಿಸಲು ಜಾಗ ಕೊಟ್ಟಿದ್ದು ಮುಸ್ಲಿಂ ರಾಜರು ಎಂಬ ಮಾತನ್ನಾಡಿದರು.ಈ ಮಾತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು ನಂತರ ರಾಜ್ಯದ ಪ್ರತಿಷ್ಠಿತ ಮಾಧ್ಯಮಗಳಲ್ಲೂ ಸುದ್ದಿ ಬಿತ್ತರವಾಗಿತ್ತು. ಇದರ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಉಡುಪಿ ಪೇಜಾವರ ಮಠದ ಶ್ರೀಗಳು ಯಾವುದೇ ಮುಸ್ಲಿಂ ರಾಜರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಆಗಲಿ ಪೇಜಾವರ ಮಠಕ್ಕಾಗಲಿ ಜಾಗವನ್ನು ಕೊಟ್ಟಿಲ್ಲ. ಉಡುಪಿ ಮಠಕ್ಕೆ ಜಾಗವನ್ನು ಕೊಟ್ಟಿದ್ದು ಭೋಜ ರಾಯ ಎಂಬ ರಾಜ ಹೀಗಾಗಿ ಮಿಥುನ್ ರೈ ಹೇಳಿಕೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
0 Comments