ಮೂಡುಬಿದಿರೆ ಸ್ವರಾಜ್ಯ ಮೈದಾನದ ಬಳಿ ಮಿನಿ ಮಾಸ್ಟ್ ದೀಪ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ 


ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 7ರ ಸ್ವರಾಜ್ಯ ಮೈದಾನದ ಬಳಿ ಮಿನಿ ಮಾಸ್ಟ್ ದೀಪ ಉದ್ಘಾಟನೆ ಮೂಡುಬಿದಿರೆ: ಪುರಸಭಾ ವತಿಯಿಂದ ನೂತನವಾಗಿ ಅಳವಡಿಸಿರುವ 3 ಮಿನಿ ಮಾಸ್ಟ್ ದೀಪವನ್ನು ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಉದ್ಘಾಟಿಸಿದರು.



 ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸ್ವರಾಜ್ಯ ಮೈದಾನವೆಂಬುದು ಮೂಡುಬಿದಿರೆಗೆ ಹೃದಯವಿದ್ದಂತೆ. ಇಲ್ಲಿರುವ 28 ಎಕ್ರೆ ಜಾಗವನ್ನು ನಮ್ಮ‌ ಸ್ವಸ್ಥ್ಯ ಆರೋಗ್ಯಕ್ಕಾಗಿ ಕಾಪಾಡಿಕೊಳ್ಳಬೇಕಾಗಿದೆ. ಮೂಡುಬಿದಿರೆ ಅತೀ ವೇಗವಾಗಿ ಬೆಳೆಯುತ್ತಿದೆ ಮತ್ತು ಅಭಿವೃದ್ಧಿಯೂ ಆಗುತ್ತಿದೆ. ಅಭಿವೃದ್ಧಿ ಆಗುವಾಗ ಸಾರ್ವಜನಿಕವಾಗಿ ಉಪಯೋಗ ಆಗುವಂತಹ ಜಾಗಗಳನ್ನು ನಾವು ಕಾಪಾಡಿಕೊಳ್ಳುವುದು ಅನಿವಾರ್ಯ. 

ಸ್ವರಾಜ್ಯ ಮೈದಾನದಲ್ಲಿರುವ ಸಿಂಥೆಟಿಕ್ ಟ್ರ್ಯಾಕ್, ಪಕ್ಕದಲ್ಲಿರುವ ಕನ್ನಡ ಭವನ ಹಾಗೂ ಸ್ವಿಮ್ಮಿಂಗ್ ಫೂಲನ್ನು ಕಾಪಾಡಿಕೊಳ್ಳಬೇಕು ಮತ್ತು ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕು ಎಂದ ಅವರು ಸರಕಾರಗಳು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೀಡುತ್ತದೆ ಆದರೆ ನಿರ್ವಹಣೆಗೆ ಬೇಕಾಗುವ ವ್ಯವಸ್ಥೆಯನ್ನು ಮಾಡದೆ ಇರುವುದರಿಂದ ಕಷ್ಟ ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಸ್ವರಾಜ್ಯ ಮೈದಾನಕ್ಕೆ ಬೇಕಾಗುವಂತಹ ಮಿನಿ ಮಾಸ್ಟ್ ದೀಪವನ್ನು ಅಳವಡಿಸಿದ್ದಲ್ಲದೆ ಬೇರೆ ಬೇರೆ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಮೂಲಕ ಪುರಸಭೆಯು ಉತ್ತಮ ಕೆಲಸಗಳನ್ನು ನಿರ್ವಹಿಸುತ್ತಿದೆ ಎಂದರು ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್, ನವೀನ್ ಶೆಟ್ಟಿ, ಪ್ರಮುಖರಾದ ಹರೀಶ್ ಎಂ ಕೆ,ಹಾಗೂ ವಾರ್ಡ್ ನ ನಾಗರಿಕರು ಈ ಸಂದರ್ಭದಲ್ಲಿದ್ದರು.

Post a Comment

0 Comments