*ಪುತ್ತಿಗೆಯಲ್ಲಿ ಬಿಜೆಪಿಯ 50 ಜನ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ*
ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿಬೈಲು ವ್ಯಾಪ್ತಿಯ ವಾರ್ಡ್ ನಂಬರ್ 1 ಹಾಗೂ 2 ರಲ್ಲಿ ಸುಮಾರು 50 ಜನ ಬಿಜೆಪಿ ಕಾರ್ಯಕರ್ತರು ಸ್ವಾಪ್ರೇರಿತರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಿಥುನ್ ರೈ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಪುತ್ತಿಗೆ ಗ್ರಾಮ ಪಂಚಾಯತ್ ರಾಜಕೀಯ ಇತಿಹಾಸದಲ್ಲಿಯೇ ಇದು ಬಹುದೊಡ್ಡ ಪರಿವರ್ತನೆಯಾಗಿದ್ದು ಸ್ಥಳೀಯ ಜನತೆ ಕಾಂಗ್ರೆಸ್ ನೀಡುತ್ತಿರುವ ಯೋಜನೆ ಹಾಗೂ ಕಾಂಗ್ರೆಸ್ನ ಜನಪರವಾದ ನಿಲುವನ್ನು ಮೆಚ್ಚಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ .
ಬಿಜೆಪಿ ಈ ಪ್ರದೇಶದಲ್ಲಿ ನಿರಂತರವಾಗಿ ಜನ ವಿರೋಧಿ ನೀತಿಗಳನ್ನು ಅನುಸರಿಸಿಕೊಂಡು ಬಂದಿದ್ದು ಜೊತೆಗೆ ಜನರಿಗೆ ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸಿಕೊಡದೇ ಇದ್ದ ಕಾರಣ ಜನರು ಇಂದು ಕಾಂಗ್ರೆಸ್ನತ್ತ ಹೊಲವನ್ನು ತೋರುತ್ತಿದ್ದಾರೆ.
0 Comments