ವಿದ್ಯಾರ್ಥಿನಿಯ ಮೃತದೇಹ ಬಾವಿಯಲ್ಲಿ ಪತ್ತೆ:ಆತ್ಮಹತ್ಯೆ ಶಂಕೆ.!

ಜಾಹೀರಾತು/Advertisment
ಜಾಹೀರಾತು/Advertisment

 ವಿದ್ಯಾರ್ಥಿನಿಯ ಮೃತದೇಹ ಬಾವಿಯಲ್ಲಿ ಪತ್ತೆ:ಆತ್ಮಹತ್ಯೆ ಶಂಕೆ.!



ಮೂಡುಬಿದಿರೆ: ತಾಲೂಕಿನ ಅಳಿಯೂರು ಸರಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯೋರ್ವಳ ಮೃತದೇಹವು ಭಾನುವಾರ ಮಧ್ಯಾಹ್ನ ಬಾವಿಯಲ್ಲಿ ಪತ್ತೆಯಾಗಿದೆ.

 ವಾಲ್ಪಾಡಿಯ ನಿವಾಸಿಗಳಾದ ಉಮೇಶ್ - ಭಾರತಿ ದಂಪತಿ ಪುತ್ರಿ ಯುತಿ (15ವ) ಎಂದು ಗುರುತಿಸಲಾಗಿದೆ.

ಯುತಿಯು ಮಧ್ಯಾಹ್ನದ ವೇಳೆಗೆ ತನ್ನ ಮನೆಯಲ್ಲಿದ್ದು ತಂದೆಯ ಬಳಿ ಮೊಬೈಲ್ ಕೊಡುವಂತೆ ಕೇಳಿಕೊಂಡಿದ್ದಾಳೆ. ತಾನು ಪೇಟೆಗೆ ಹೋಗಿ ಬಂದ ಮೇಲೆ ಮೊಬೈಲ್ ಕೊಡುವುದಾಗಿ ತಿಳಿಸಿದ್ದಾರೆ. ತಂದೆ, ತಾಯಿ ಮತ್ತು ತಂಗಿ ಪೇಟೆಗೆ ಹೋದ ನಂತರ ಮನೆಯಲ್ಲಿ ಯುತಿ ಒಬ್ಬಳೇ ಇದ್ದಾಲೆನ್ನಲಾಗಿದೆ.

 ಹೆತ್ತವರು ಪೇಟೆಯಿಂದ ಹಿಂತಿರುಗಿ ಮನೆಗೆ ಹೋದಾಗ ಯುತಿ ಮನೆಯಲ್ಲಿ ಕಾಣದಿದ್ದಾಗ ಎಲ್ಲಾ ಕಡೆಯಲ್ಲಿ ಹುಡುಕಾಡಿದ್ದಾರೆ. ನಂತರ ಬಾವಿಯಲ್ಲಿ ಮೃತದೇಹ ತೇಲುತ್ತಿತ್ತು ಎನ್ನಲಾಗಿದೆ. ಬಾವಿಗೆ ಬಿದ್ದಿದ್ದರೂ ಆಕೆ ನೀರು ಕುಡಿದಿಲ್ಲದಿರುವುದರಿಂದ ಹಲವು ಸಂಶಯಗಳು ಮೂಡಿದೆ.

   ಕಾಲು ಜಾರಿ ಅಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದೇ ಅಥವಾ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಅಥವಾ ಯಾರಾದರೂ ಬಾವಿ ತಳ್ಳಿರಬಹುದೇ ಎಂಬುದು ಪೊಲೀಸ್ ತನಿಖೆಯಿಂದ ಇನ್ನಷ್ಟೇ ಗೊತ್ತಾಗಬೇಕಿದೆ.

ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Post a Comment

0 Comments