ಗಂಗಾ ಕಲ್ಯಾಣ ಯೋಜನೆ' ಅಕ್ರಮ ಕುರಿತು 'ಸಿಐಡಿ ತನಿಖೆ' ಆರಂಭ
ಬೆಂಗಳೂರು: ಡಾ.ಅಂಬೇಡ್ಕರ್ ಅಭಿವೃದ್ಧಿ
ನಿಗಮದಲ್ಲಿ ಗಂಗಾ ಕಲ್ಯಾಣ ಸೇರಿ ಇತರ
ಯೋಜನೆಗಳಲ್ಲಿ ನಡೆದಿರುವ ಅಕ್ರಮಗಳ ಸಂಬಂಧ ಸಿಐಡಿ ತನಿಖೆ ಶುರುವಾಗಿದೆ.
ಗೃಹ ಇಲಾಖೆ ಸದ್ಯದಲ್ಲೇ ತನಿಖೆ ನಡೆಸಲು ಅಧಿಕಾರಿಯೊಬ್ಬರನ್ನು ನಿಯೋಜಿಸಲಿದೆ. ನಕಲಿ ದಾಖಲೆ ಸಲ್ಲಿಸಿ ಟೆಂಡರ್ ಪಡೆದಿರುವುದು, ಅನುದಾನ ದುರುಪಯೋಗ ಆಗಿರುವುದು ಹಾಗೂ ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಸೇರಿ ಸಮಗ್ರವಾಗಿ ತನಿಖೆ ಸರ್ಕಾರಕ್ಕೆ ವರದಿ ನೀಡಲಿದೆ.
ಹೇಗಾದರೂ ಮಾಡಿ ಹುದ್ದೆಯನ್ನು ಉಳಿಸಿಕೊಳ್ಳಲು ಕಳಂಕಿತ ಅಧಿಕಾರಿ ರಾಜಕೀಯ ಪ್ರಭಾವ ಬಳಸುತ್ತಿದ್ದಾರೆ. ಅಲ್ಲದೆ, ಗಂಗಾ ಕಲ್ಯಾಣ, ನೇರ ಸಾಲ, ಉದ್ಯಮ ಶೀಲತಾ, ಮೈಕ್ರೋ ಕ್ರೆಡಿಟ್, ಸಮೃದ್ಧಿ ಸೇರಿ ಇತರ ಯೋಜನೆಗಳಲ್ಲಿ ಭ್ರಷ್ಟಾಚಾರ, ಅನುದಾನ ಮತ್ತು ಅಧಿಕಾರ ದುರ್ಬಳಕೆ ಆರೋಪದಲ್ಲಿ ಸಿಲುಕಿದ್ದರೂ ಆರೋಪಿತ ಅಧಿಕಾರಿ ಎಂಡಿ ಹುದ್ದೆ ಮುಂದುವರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ,ಕೆಲ ಸಂಘಟನೆಗಳು ಸರ್ಕಾರಕ್ಕೆ ದೂರು ನೀಡಿವೆ.
0 Comments