ಭರ್ಜರಿ ಅನುದಾನ ಹೊತ್ತು ಮತ್ತೊಮ್ಮೆ ರಾಜ್ಯಕ್ಕೆ ಬರುತ್ತಿದ್ದಾರೆ ಪ್ರಧಾನಿ:ಹೀಗಿದೆ ವೇಳಾಪಟ್ಟಿ

ಜಾಹೀರಾತು/Advertisment
ಜಾಹೀರಾತು/Advertisment


 ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಕರ್ನಾಟಕ ಪ್ರವಾಸ ಕೈಗೊಂಡಿದ್ದು ಜ.19 ಬೆಳಗ್ಗೆ 11ಕ್ಕೆ ಕಲಬುರಗಿಗೆ ಆಗಮಿಸಲಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣಕ್ಕೆ ವಿಮಾನದ ಮೂಲಕ ಆಗಮಿಸಿ ನಂತರ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್​ ಗ್ರಾಮದ ಹೆಲಿಪ್ಯಾಡ್​ಗೆ ತೆರಳಲಿದ್ದಾರೆ. ನಂತರ ಮಧ್ಯಾಹ್ನ 12 

ಭರ್ಜರಿ ಅನುದಾನಗಳ ಕೊಡುಗೆ...

ಕೊಡೆಕಲ್​ ಗ್ರಾಮದಲ್ಲಿ ನಾರಾಯಣಪುರ ಎಡದಂಡೆ ಕಾಲುವೆ ಜಾಲದ ವಿಸ್ತರಣೆ ಮತ್ತು ನಾರಾಯಣಪುರ ಎಡದಂಡೆ ಕಾಲುವೆಯ ಆಧುನೀಕರಣ, ಸೂರತ್-ಚೆನ್ನೈ ಎಕ್ಸ್​​ಪ್ರೆಸ್ ವೇ ಪ್ಯಾಕೇಜ್-3 ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕೊಡೆಕಲ್​ ಗ್ರಾಮದಿಂದ ಮಧ್ಯಾಹ್ನ 01.05ಕ್ಕೆ ನಿರ್ಗಮಿಸಿ, 01.10 ಕ್ಕೆ ಕೊಡೆಕಲ್ ಹೆಲಿಪ್ಯಾಡ್​ನಿಂದ ಹೆಲಿಕಾಪ್ಟರ್ ಮೂಲಕ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಹೆಲಿಪ್ಯಾಡ್​ನಲ್ಲಿ ಮಧ್ಯಾಹ್ನ 2 ಗಂಟೆಗೆ ಬರಲಿದ್ದಾರೆ. ಮಳಖೇಡನಲ್ಲಿ ಮಧ್ಯಾಹ್ನ 02.15ಕ್ಕೆ ನಡೆಯುವ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿ, ನೂತನವಾಗಿ ರಚಿಸಲಾಗಿರುವ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಳಖೇಡ ಕಾರ್ಯಕ್ರಮ ಸ್ಥಳದಿಂದ ನಿರ್ಗಮಿಸಿ, 03.05ಕ್ಕೆ ಹೆಲಿಕಾಪ್ಟರ್ ಮೂಲಕ ಕಲಬುರಗಿ ಏರ್​ಪೋರ್ಟ್​​ಗೆ ಹೋಗುತ್ತಾರೆ. ಅಲ್ಲಿಂದ 03.35ಕ್ಕೆ ಕಲಬುರಗಿ ವಿಮಾನ ನಿಲ್ದಾಣದಿಂದ ದೆಹಲಿಗೆ ಹಿಂದಿರುಗಲಿದ್ದಾರೆ.

Post a Comment

0 Comments