ಅತಿಶಯ ಕ್ಷೇತ್ರ ಹೊಂಬುಜಕ್ಕೆ ಮೂಡುಬಿದಿರೆಯಿಂದ ಹೊರೆ ಕಾಣಿಕೆ

ಜಾಹೀರಾತು/Advertisment
ಜಾಹೀರಾತು/Advertisment

 ಅತಿಶಯ ಕ್ಷೇತ್ರ ಹೊಂಬುಜಕ್ಕೆ ಮೂಡುಬಿದಿರೆಯಿಂದ ಹೊರೆ ಕಾಣಿಕೆ



ಮೂಡುಬಿದಿರೆ: ಜೈನರ ಪಾವನ ಕ್ಷೇತ್ರ ಹೊಂಬುಜದಲ್ಲಿ ಬಸದಿ ಜೀರ್ಣೋದ್ಧಾರಗೊಂಡು ಜ.22ರಿಂದ ಪಂಚಕಲ್ಯಾಣ ಮತ್ತು ಪ್ರತಿಷ್ಠಾ ಮಹೋತ್ಸವ ನಡೆಯಲಿರುವ ಪ್ರಯುಕ್ತ ಮೂಡುಬಿದಿರೆ, ಮಾರ್ನಾಡು, ಸಿದ್ಧಕಟ್ಟೆ, ಕುಪ್ಪೆಪದವು, ವಾಮದಪದವು ಮೊದಲಾದ ಕಡೆಗಳಿಂದ ಜೈನ ಬಾಂಧವರು ಮೂಡುಬಿದಿರೆ ಹಿರೇ ಅಮ್ಮನವರ ಬಸದಿಯ ಜೀರ್ಣೋದ್ಧಾರ ಸಮಿತಿಯ ನೇತೃತ್ವದಲ್ಲಿ ಹಸಿರು ಹೊರೆಕಾಣಿಕೆಯನ್ನು ಸಮರ್ಪಿಸಿದರು.

ಸುಮಾರು ಐವತ್ತಕ್ಕಿಂತಲೂ ಅಧಿಕ ಮಂದಿ 8 ವಾಹನಗಳಲ್ಲಿ ಅಕ್ಕಿ, ತೆಂಗಿನಕಾಯಿ ಮತ್ತು ಪೂಜಾ ಸಾಮಾಗ್ರಿಗಳನ್ನು ಸನ್ನಿಧಾನಕ್ಕೆ ಸಮರ್ಪಿಸಿದರು.

  ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಭಾರತಿ ಭಾಸ್ಕರ್ ಕಟ್ಟೆಮಾರ್ ಇವರ ನೇತೃತ್ವದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ರಾಜವರ್ಮ ಬೈಲಂಗಡಿ, ರಂಜಿತ್ ಕುಮಾರ್ ತಮನಂಗಡಿ, ಮಿತ್ರಸೇನ ಇಂದ್ರ, ಸಂಪತ್ ಕುಮಾರ್, ವಿಲಾಸ್ ಕುಮಾರ್, ಪುನೀತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


ಸೇವಾ ಕಾರ್ಯ ನಡೆಸುವಂತೆ ನಿರ್ದೇಶನ : ಆಗಮಿಸಿದ ಹೊಂಬುಜ ಶ್ರೀ ಜೈನ ಮಠದ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕರು ಆಶೀರ್ವದಿಸಿ, ಮುಂಬರುವ ಪಂಚಕಲ್ಯಾಣ ಮಹೋತ್ಸವದಲ್ಲಿ ಒಂದು ದಿವಸದ ಸೇವಾ ಕಾರ್ಯವನ್ನು ನಡೆಸುವಂತೆ ನಿರ್ದೇಶಿಸಿದರು.

Post a Comment

0 Comments