ಬಲಿಪ ಪ್ರಸಾದ ಭಾಗವತರ 50ರ ನೆನಪು ರಾಘವೇಂದ್ರ ಭಂಡಾರ್ಕಾರ್ ಗೆ ಸಮ್ಮಾನ

ಬಲಿಪ ಪ್ರಸಾದ ಭಾಗವತರ 50ರ ನೆನಪು
 ರಾಘವೇಂದ್ರ ಭಂಡಾರ್ಕಾರ್ ಗೆ ಸಮ್ಮಾನ
ಮೂಡುಬಿದಿರೆ: ಬಲಿಪ ಪ್ರಸಾದ್ ಭಾಗವತರ 50ರ ನೆನಪಿನ ಅಂಗವಾಗಿ ಆಯೋಜಿಸಲಾದ ಪಂಚಾಶತ್ ಸ್ಮರಣೆ–ಪಂಚಾಶತ್ ಸಮ್ಮಾನ್ ಸರಣಿಯ 12ನೇ ಸನ್ಮಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಸಂಘಟಕ ರಾಘವೇಂದ್ರ ಭಂಡಾರ್ಕಾರ್ ಅವರನ್ನು ಮಾರೂರು ಗುಡ್ಡಲಂಗಡಿಯಲ್ಲಿ ಬುಧವಾರ ಗೌರವಿಸಲಾಯಿತು. 

ಯಕ್ಷಗಾನ ಕಲಾವಿದ, ಸಂಘಟಕ ಶಾಂತರಾಮ ಕುಡ್ವ ಸಂಸ್ಮರಣ ಭಾಷಣ ಮಾಡಿ ಪ್ರಸಾದ್ ಬಲಿಪರು ಬಲಿಪ ಪರಂಪರೆಯ ನಾಲ್ಕನೇ ತಲೆಮಾರಿನ ಕೊಂಡಿಯಾಗಿದ್ದು, ಬಲಿಪ ನಾರಾಯಣ ಭಾಗವತರು ಸೇರಿದಂತೆ ಅವರ ಕುಟುಂಬದ ಕಲಾಸೇವೆ ಯಕ್ಷಗಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ. ಯಾವುದೇ ಧ್ವನಿವರ್ಧಕವಿಲ್ಲದೆ ಸಾವಿರಾರು ಪ್ರೇಕ್ಷಕರಿಗೂ ತಲುಪುವ ಅವರ ಏರುಕಂಠ ಯಕ್ಷಗಾನ ರಂಗದ ವಿಶಿಷ್ಟ ಸಂಪತ್ತಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಘವೇಂದ್ರ ಭಂಡಾರ್ಕಾರ್, ಬಾಲ್ಯದಿಂದಲೇ ಬಲಿಪ ಮಾಧವ ಭಾಗವತ ಹಾಗೂ ಬಲಿಪ ನಾರಾಯಣ ಭಾಗವತರೊಂದಿಗೆ ಆತ್ಮೀಯ ಒಡನಾಟವನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದ ಸಂಘಟಕ ಪತ್ರಕರ್ತ ಕೃಷ್ಣಕುಮಾರ್ ಪ್ರಾಸ್ತಾವಿಕ ಮಾತನಾಡಿದರು.
ಪಡುಮಾರ್ನಾಡು ಪಂಚಾಯತಿ ಮಾಜಿ ಅಧ್ಯಕ್ಷರಾದ ಎಂ. ದಯಾನಂದ ಪೈ,ಮೊಹಮ್ಮದ್ ಅಸ್ಲಮ್, ರೋಟರಿ ಮಿಡ್ ಟೌನ್ ನ ಅಧ್ಯಕ್ಷ ಕರುಣಾಕರ ದೇವಾಡಿಗ, ಕಾರ್ಯದರ್ಶಿ ಮುರಳೀಧರ ಕೋಟ್ಯಾನ್, ಅಭಿನಂದನ್ ಬಲ್ಲಾಳ್, ರೋಟರಿ ಜಿಲ್ಲೆ ಸಹಾಯಕ ಗವರ್ನರ್ ರಾಬರ್ಟ್ ಫ್ರಾಂಕ್ಲಿನ್ ರೇಗೋ, ಸಾಲಿನ ಜಿಲ್ಲಾ ಗವರ್ನರ್ ಜೋಯಲ್ ಡಿಸೋಜ, ಜಿಲ್ಲಾ ವಲಯ ಸೇನಾನಿ ವಿದೇಶ್ ಎಂ., ಪ್ರಮುಖರಾದ ಗಣೇಶ್ ನಾಯಕ್ ಬಾರ್ದಿಲ, ಶಿವಪ್ರಸಾದ್ ಹೆಗ್ಡೆ, ಕರುಣಾಕರ ದೇವಾಡಿಗ, 
ಸುಶಾಂತ ಕರ್ಕೇರ, 
ಶಂಕರ ಆಚಾರ್ಯ, ಸುಶಾಂತ ಕರ್ಕೇರ, ಪ್ರಶಾಂತ್ ಕೆ. ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments

Advertisement