ಡಿಸೆಂಬರ್ 22,23 ಮತ್ತು 24 ನೇ ತಾರೀಕಿನಂದು ದೈವಸ್ಥಾನದ ಹಾಗೂ ಗರಡಿಗಳಲ್ಲಿ ನೇಮೋತ್ಸವ ನಡೆಯಲಿದ್ದು ಈ ನಿಮಿತ್ತ ಚಪ್ಪರ ಮುಹೂರ್ತವನ್ನು ನೇರವರಿಸಲಾಯಿತು.
22ನೇ ತಾರೀಖುನಂದು ಕಲ್ಲೇರಿ ಕುಕ್ಕಿನಂತಾಯ ದೈವಸ್ಥಾನದಲ್ಲಿ ಕುಕ್ಕಿನಂತಾಯ ದೈವದ ಗಗ್ಗರ ಸೇವೆ ಮತ್ತು 23ರಂದು ಅಳಿಯೂರು ಉಮಲತ್ತಡೆ ಗರಡಿಯಲ್ಲಿ ದೈವ ಧರ್ಮರಸು ಹಾಗೂ ಕೊಡಮಣಿತ್ತಾಯ ದೈವಕ್ಕೆ ಗಗ್ಗರ ಸೇವೆ ಮತ್ತು 24 ತಾರೀಖಿನಂದು ಬ್ರಹ್ಮ ಬೈದೆರ್ ಗಳ ಮತ್ತು ಮಯಂದಾಲೆ ದೈವದ ಗಗ್ಗರ ಸೇವೆ ನಡೆಯಲಿದೆ. ಹಾಗೂ 24ನೇ ತಾರೀಖು ನಂದು ಬೆಳಿಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಾಲ್ಪಾಡಿ ಎ ಮತ್ತು ಸಿ ಒಗ್ಗೂಟದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಗರಡಿಯ ಪ್ರಾಂಗಣದಲ್ಲಿ ನಡೆಯಲಿದೆ ಎಂದು ಸಮಿತಿ ಮುಖ್ಯಸ್ಥರು ಮಾಹಿತಿ ನೀಡಿದರು.
0 Comments