ಶಿರ್ತಾಡಿಯಲ್ಲಿ ಮೈತ್ರಿ ಸೌಧಕ್ಕೆ ಶಿಲಾನ್ಯಾಸ

ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕೇಂದ್ರ ಕಚೇರಿ ಹಾಗೂ ವಾಣಿಜ್ಯ ಸಂಕೀರ್ಣ ಒಳಗೊಂಡ ಮೈತ್ರಿ ಸೌಧಕ್ಕೆ  ಶಿಲಾನ್ಯಾಸ ನಡೆಯಿತು.

ಈ ಸಂದರ್ಭ ನಡೆದ ಧಾರ್ಮಿಕ ವಿಧಿ ವಿಧಾನಗಳನ್ನು ಕೇಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ವೇ|ಮೂ| ಕೆ. ಅನಂತ ಅಸ್ರಣ್ಣ ನೆರವೇರಿಸಿದರು.

ಸಭೆಯನುದ್ದೇಶಿಸಿ ಮಾತನಾಡಿದ ಡಾ| ಆಶೀರ್ವಾದ್ ಶಿರ್ತಾಡಿ ಹಾಗೂ ಆಸುಪಾಸಿನ ಗ್ರಾಮಗಳ ಅಭಿವೃದ್ಧಿಗೆ ನವಮೈತ್ರಿ ಸಹಕಾರಿಯ ಕೊಡುಗೆ ಅಪಾರವಾದುದು ಎಂದರು.

ಭುವನಜ್ಯೋತಿ ಶಾಲೆಯ ಪ್ರಾಂಶುಪಾಲರಾದ ಆರ್. ಪ್ರಶಾಂತ್ ಡಿ’ಸೋಜಾ ಗ್ರಾಮೀಣ ಜನರ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರ ಸುಲಭ ಪಾತ್ರವಹಿಸುತ್ತದೆ ಎಂದರು.

ಹಿರಿಯ ಕೃಷಿಕ, ಸಾರಿಗೆ ಉದ್ಯಮಿ ಸೆಬಾಸ್ಟಿಯನ್ ಪಿರೇರಾ, ಪಣಪಿಲ ಅರಮನೆ ಶ್ರೀವರ್ಮ ಶೆಟ್ಟಿ, ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೋಂಕೆ ನಾರಾಯಣ ಶೆಟ್ಟಿ, ಪ್ರಭಾ ಕ್ಲಿನಿಕ್‌ನ ಡಾ. ಆಶೀರ್ವಾದ್, ಭುವನಜ್ಯೋತಿ ವಸತಿ ಶಾಲೆಯ ಪ್ರಾಂಶುಪಾಲರಾದ ಆರ್. ಪ್ರಸಾದ್ ಡಿ’ಸೋಜಾರವರು ಶಂಕುಸ್ಥಾಪನೆ ನೆರೆವೇರಿಸಿದರು.

ಕೋಂಕೆ ನಾರಾಯಣ ಶೆಟ್ಟಿಯವರು ಮಾತನಾಡಿ ಶುಭ ಹಾರೈಸಿದರು.

ನವಮೈತ್ರಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಸತೀಶ್ ವಿ. ಶೆಟ್ಟಿ, ಉಪಾಧ್ಯಕ್ಷ ವಿನಯ ಹೆಗ್ಡೆ ವೇದಿಕೆಯಲ್ಲಿದ್ದರು.

ನಿರ್ದೇಶಕರುಗಳು ಹಾಗೂ ಸಿಬ್ಬಂದಿಗಳು ಸಹಕರಿಸಿದರು.

ನವೀನ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments

Advertisement