ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮುಚ್ಚೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುರಭಿವನ ಗೋಶಾಲಾ ಓಂ ಪ್ರಕೃತಿ ಧಾಮ ಟ್ರಸ್ಟ್ ರಿಜಿಸ್ಟರ್ಡ್ ಕೊಂಪದವು ಇಲ್ಲಿನ ಗೋಶಾಲೆಯಿಂದ ಗೋವುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಘಟನೆಯು ನಡೆದಿದೆ. ವರದಿಯಲ್ಲಿ ಉಲ್ಲೇಖಿಸಿದಂತೆ ಗೋ ಶಾಲೆಯ ಕೆಲಸಗಾರರು ತಮ್ಮ ಕೆಲಸಗಳನ್ನು ಮುಗಿಸಿ ರಾತ್ರಿ ಹೊತ್ತು ಗೇಟುಗಳನ್ನು ಹಾಕಿ ಎಂದಿನಂತೆ ಗೋಶಾಲೆಯ ಒಳಗೆ ತೆರಳಿದ್ದರು ಆದರೆ ರಾತ್ರಿ ಹೊತ್ತಿನಲ್ಲಿ ತಪಾಸಣೆಗೆ ಬಂದಾಗ ಗೇಟ್ ಭಾಗದಲ್ಲಿ ಮುರಿದು ಬಿದ್ದಿದ್ದು ಕಾಂಪೌಂಡ್ ಒಡೆಯುವ ಯತ್ನವು ಕಂಡುಬಂದಿತ್ತು. ಕೂಡಲೇ ಗೋ ಶಾಲೆಯ ಮುಖ್ಯಸ್ಥರು ಪೂಜ್ಯ ಗುರೂಜಿಗಳಿಗೆ ಮಾಹಿತಿ ನೀಡಿದ್ದು ನಂತರ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
200ಕ್ಕೂ ಅಧಿಕ ವಿವಿಧ ತಳಿಯ ಉತ್ತಮ ಗುಣಮಟ್ಟದ ಹಸುಗಳು ಕರುಗಳು ಇಲ್ಲಿದ್ದು ಅನೇಕ ವರ್ಷಗಳಿಂದ ಗುರೂಜಿಯವರ ನೇತೃತ್ವದಲ್ಲಿ ಇಲ್ಲಿ ಗೋಪಾಲನೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಆದರೆ ಇತ್ತೀಚಿನ ಕೆಲ ದಿನಗಳಲ್ಲಿ ಗೋಕಳ್ಳರ ಕರಿ ನೆರಳು ಈ ಸುಂದರ ಗೋ ಆಶ್ರಮಕ್ಕೆ ಬಿದ್ದಿದ್ದು ಗೋ ಶಾಲಾ ಮುಖ್ಯಸ್ಥರಿಗೆ ಆತಂಕದ ಛಾಯೆ ಮೂಡಿದೆ. ಈ ನಿಟ್ಟಿನಲ್ಲಿ ಯಾರೇ ಆಗಿದ್ದರು ಅವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಖ್ಯಸ್ಥರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಸದ್ಯ ಎಫ್ ಐ ಆರ್ ದಾಖಲಾಗಿದೆ.
0 Comments