ಮೈಸೂರಿನಿಂದ ಅಯ್ಯಪ್ಪ ದಶನಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ಹಲ್ಲೆ ನಡಸಿದ ಘಟನೆ ಇಂದು ಕೇರಳದ ಕಾಲಡಿ ಹೆದ್ದಾರಿಯಲ್ಲಿ ಸಂಭವಿಸಿದೆ
ಮೈಸೂರಿನಿಂದ ಟೆಂಪೋ ಮೂಲಕ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಶಬರಿ ಮಲೆಗೆ ತೆರಳುತ್ತಿದ್ದರು.ಇದೇ ವೇಳೆ ಶಬರಿಮಲೆಗೆ ಹೊರಟಿದ್ದ ಸ್ಥಳೀಯ ಕಾರೊಂದು ಭಕ್ತಾಧಿಗಳ ಟೊಂಫೋಕ್ಕೆ ಡಿಕ್ಕಿ ಹೊಡೆದಿದೆ. ಟೆಂಪೋ ಚಾಲಕನ ತಪ್ಪಲ್ಲದಿದ್ದರೂ ಸ್ಥಳೀಯರು ಚಾಲಕನಿಗೆ ಧಮ ದೇಟು ನೀಡಿದ್ದಾರೆ. ಮಾತ್ರವಲ್ಲದೇ ಇದನ್ನು ಪ್ರಶ್ನಿಸಿದ ಭಕ್ತರ ಮೇಲೆ ಕೂಡಾ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಕೇರಳ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿಲಾಗಿದೆ. ಬಳಿಕ ಕಾರು ಚಾಲಕನದೇ ತಪ್ಪು ಎಂದು ತಿಳಿದುಬಂದಿದೆ. ಅಲ್ಲದೆ ಕಾರು ಚಾಲಕ ಮತ್ತು ಸ್ಥಳೀಯರೊಡನೆ ಅಯ್ಯಪ್ಪ ಭಕ್ತಾದಿಗಳಲ್ಲಿ ಕ್ಷಮೆ ಯಾಚಿಸುವಂತೆ ಕೇಳಿದ್ದಾರೆ .
0 Comments