ಮೂಡುಬಿದಿರೆ: ಹೊಸಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೂ 80 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಿವಿಧ ರಸ್ತೆ ಕಾಮಗಾರಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಮಂಗಳವಾರ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ಕ್ಷೇತ್ರದಲ್ಲಿ ಈಗಾಗಲೇ 2,000 ಕೋ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಕುಡಿಯುವ ನೀರು, ರಸ್ತೆ, ದಾರಿ ದೀಪ ಅಥವಾ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ನಡೆಸುತ್ತಾ ಬಂದಿದ್ದು, ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಈಗಾಗಲೇ 100 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಪ್ರತಿ ಮನೆ ಮನೆಗೂ ನೀರಿನ ಟ್ಯಾಪ್ ಹಾಕಿಸಿ ಕೊಟ್ಟು ದಿನದ 24 ಗಂಟೆಗಳ ಕಾಲ ನೀರನ್ನು ಒದಗಿಸುವ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು. ಈಗಾಗಲೇ ಕುಡಿಯುವ ನೀರಿನ ಕಾರ್ಯವು ಆರಂಭಗೊಂಡಿದೆ ಎಂದು ತಿಳಿಸಿದರು.
ಹೊಸಬೆಟ್ಟು ಗ್ರಾ.ಪಂ.ವ್ಯಾಪ್ತಿಯ ವಾರ್ಡ್ 1ರ ರಾಂಬೈಲು ರಸ್ತೆ, ಸಂಗಾಡಿಬೈಲು ರಸ್ತೆ, ಸಂಗಾಡಿಬೈಲು ರಸ್ತೆ ಕಾಂಕ್ರೀಟ್ ಚರಂಡಿ ನಿರ್ಮಾಣ, ತಾಕೊಡೆ ಸುರ್ಲಾಯಿ ರಸ್ತೆ, 2 ನೇ ವಾರ್ಡಿನ ಕದ್ರಂದಗುಡ್ಡೆ ಪೆರಂಕಾಡಿ ರಸ್ತೆ, ಹೊಸಬೆಟ್ಟು ಫ್ರೌಢಶಾಲೆ ರಸ್ತೆ ಮತ್ತು ನಡಿಬೆಟ್ಟು ಪುನ್ಕೆದಡಿ ರಸ್ತೆ, ಮಾಸ್ತಿಕಟ್ಟೆ ಮೇಗಿನಕೋಡಿ ರಸ್ತೆ ಹೀಗೆ ಒಟ್ಟು 40 ಲಕ್ಷ ಅನುದಾನದ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು.
ಹೊಸಬೆಟ್ಟು ಗ್ರಾಮ ಪಂಚಾಯತ್ ಸದಸ್ಯರುಗಳಾದ ಪ್ರದೀಪ್ ಕುಮಾರ್, ಸಚ್ಚಿಂದ್ರ, ಇರುವೈಲು ಗ್ರಾಮ ಪಂಚಾಯತ್ ಸದಸ್ಯ ನಾಗೇಶ್ ಅಮೀನ್, ಮಾಜಿ ಪಂಚಾಯತ್ ಸದಸ್ಯ ಯೋಗಿಶ್ ಶೆಟ್ಟಿ ಪುಚ್ಚಮೊಗರು, ಹೊಸಬೆಟ್ಟು ಶಕ್ತಿಕೇಂದ್ರದ ಪ್ರಮುಖ್ ಉಮೇಶ್, ಪುಚ್ಚಮೊಗರು ಬೂತ್ ಅಧ್ಯಕ್ಷ ಹರೀಶ್, ಹೊಸಬೆಟ್ಟು ಬೂತ್ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಪವನ್, ಭೂ ನ್ಯಾಯ ಮಂಡಳಿ ಸದಸ್ಯ ಹರೀಶ್ ಎನ್ ಪೂಜಾರಿ, ಕೃಷಿಕರಾದ ಶ್ಯಾಮ್ ಭಟ್, ಅಮ್ಮಿ ಕೋಟ್ಯಾನ್, ಅಚ್ಯುತ ಕೋಟ್ಯಾನ್, ಜೋನ್ ರೊಡ್ರಿಗಸ್, ಆನಂದ ಆಚಾರ್ಯ, ಗುತ್ತಿಗೆದಾರರಾದ ನಟರಾಜ್, ವಿಕ್ರಂ ಜೈನ್ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.
0 Comments