ದೆಹಲಿಯಲ್ಲಿ ನಡೆದ ಶ್ರದ್ಧಾ ಹತ್ಯೆ ಬಳಿಕ , ಪಾಂಡವನಗರದ ಮಹಿಳೆ ಮತ್ತು ಆಕೆಯ ಮಗ ಸೇರಿಕೊಂಡು ಪತಿಯನ್ನು ಕೊಂದು ತುಂಡಿರಿಸಿ ಫ್ರಿಡ್ಜ್ನಲ್ಲಿ ಇಟ್ಟಿದ್ದ ಸಾಲು ಸಾಲಿ ಪ್ರಕರಣಗಳು ಕೇಳಿ ಬರುತ್ತಾಲೇ ಇದೆ. ಇದೀಗ ಅಂತಹದೇ ಘಟನೆ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ನಡೆದಿದೆ. ಹೌದು ಪಾಪಿ ಮಗನೋರ್ವ ತನ್ನ ಸ್ವಂತ ತಂದೆಯನ್ನೇ ಕೊಂದು ದೇಹವನ್ನು ತುಂಡು ತುಂಡು ಮಾಡಿದ್ದಾನೆ.
ಏನಿದು ಘಟನೆ?
ಪರಶುರಾಮ ಕುಳಲಿ (54) ಎಂಬವರು ದಿನನಿತ್ಯ ಕುಡಿದು ಮನೆಗೆ ಬಂದು ಕಿರಿ ಕಿರಿ ಮಾಡುತ್ತಿದ್ದನು. ಮಗನನ್ನು ನೋಡಿದರೆ ಸಾಕು ಬೈಯುವುದು, ಹೊಡೆಯುವುದು ಇದೇ ಮಾಡುತ್ತಿದ್ದನು. ಡಿ .6 ರಂದು ಕುಡಿದ ಪರಶುರಾಮ ಕುಳಲಿ, ಕಬ್ಬಿಗೆ ಏಕೆ ನೀರು ಹಾಯಿಸಲು ಹೋಗಿಲ್ಲ ಎಂದು ಮಗ ವಿಠ್ಠಲ ಕುಳಲಿ (20) ಜೊತೆ ಜಗಳಕ್ಕೆ ಮುಂದಾಗಿದ್ದ. ಇದರಿಂದ ರೋಚ್ಚಿಗ್ಗೆದ್ದ ಮಗ ತಂದೆಯನ್ನು ರೋಡ್ ನಿಂದಲೇ ಹಲ್ಲೆ ಮಾಡಿರುತ್ತಾನೆ. ಈ ವೇಳೆ ತಂದೆಯೇ ಮಗನಿಗೆ ಹೊಡೆಯಲು ಕೊಡಲಿ ಎತ್ತಿದ್ದ. ರೋಸಿ ಹೋದ ಮಗ ರಾಡ್ನಿಂದ ಹಲ್ಲೆ ನಡೆಸಿ ತಂದೆಯನ್ನು ಕೊಲೆಗೈದ.
ಕೊಲೆ ಮಾಡಿದ ಬಳಿಕ ಈ ವಿಷಯ ಯಾರಿಗು ತಿಳಿಯದಂತೆ ಕೊಳವೆ ಬಾವಿಗೆ ಹಾಕಲು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ತಮ್ಮ ಹೊಲಕ್ಕೆ ಕೊಂಡೊಯ್ಯುದನು. ಕೊಳವೆ ಒಳಗೆ ನುಗ್ಗದ ಕಾರಣ ಮೃತದೇಹವನ್ನು 30 ತುಂಡಾಗಿ ಕತ್ತರಿಸಿ ಬೋರ್ವೆಲ್ಗೆ ಹಾಕಿ ಏನು ತಿಳಿಯದಂತೆ ಮನೆಗೆ ವಾಪಸ್ ಆಗುತ್ತಾನೆ.
ಪಾಪಿ ಮಗನ ಬಣ್ಣ ಬಯಲಾದು ಹೇಗೆ?ತನ್ನ ತಂದೆಯನ್ನೇ ಕೊಂದು ಕೊಳವೆ ಬಾವಿಗೆ ಹಾಕಿ ಅಮಾಯಕನಂತೆ ಮನೆಗೆ ಬಂದು ಸೇರಿದ್ದನು. ಘಟನೆಯಾದ ಮೂರು ದಿನದ ಬಳಿಕ ವಿಚಾರವನ್ನು ಮನೆಯವರಲ್ಲಿ ಹೇಳಿಕೊಳ್ಳುತ್ತಾನೆ. ಇದರಿಂದ ಬೆಚ್ಚಿಬಿದ್ದ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಮುಧೋಳ ಠಾಣೆ ಪೊಲೀಸರು, ಸ್ಥಳಕ್ಕೆ ಜೆಸಿಬಿಯೊಂದಿಗೆ ಬಂದು ಕೊಳವೆಬಾವಿ ಅಗೆದು ಶವ ಹೊರ ತೆಗೆದಿದ್ದಾರೆ. ಸದ್ಯ ಆರೋಪಿ ವಿಠಲನನ್ನು ಪೊಲೀಸರು ಬಂಧಿಸಿದ್ದಾರೆ.
0 Comments