ಮಂಗಳೂರು ರೈಲ್ವೇ ನಿಲ್ದಾಣದಿಂದ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೋಲ್ವೋ ಬಸ್ ಸೇವೆಯನ್ನು ಇಂದು ಮಂಗಳೂರು ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಡಾಕ್ಟರ್ ಭಾರತ್ ಶೆಟ್ಟಿ ಮತ್ತು ಶ್ರೀ ಉಮಾನಾಥ ಕೋಟ್ಯಾನ್, KSRTC ವಿಭಾಗ ಅಧಿಕಾರಿ ಶ್ರೀ ರಾಜೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕರಾವಳಿ ಕನ್ನಡ ತೇರು ಬಸ್ ಸೇವೆಯನ್ನು ಉದ್ಘಾಟಿಸಲಾಯಿತು.
ಹೇಗಿದು ಸೇವೆ..?
ಮಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದಿಂದ ವಿಮಾನ ವೇಳಾಪಟ್ಟಿ: ಬೆಳಿಗ್ಗೆ 6.30, ಬೆಳಿಗ್ಗೆ 8.45, ಮಧ್ಯಾಹ್ನ 11.10, ಮಧ್ಯಾಹ್ನ 3.00, ಸಂಜೆ 5.15, ಮತ್ತು 7.30.
ವಿಮಾನ ನಿಲ್ದಾಣದಿಂದ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ವೇಳಾಪಟ್ಟಿ: ಬೆಳಿಗ್ಗೆ 7.40, ರಾತ್ರಿ 10.00, ಮಧ್ಯಾಹ್ನ 12.20, ಮಧ್ಯಾಹ್ನ 4.05, ಸಂಜೆ 6.25, ಸಂಜೆ 8.45.
ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ: ಬೆಳಿಗ್ಗೆ 7.15, ಬೆಳಿಗ್ಗೆ 8.45. ಮತ್ತು ಸಂಜೆ 5.15. ವಿಮಾನ ನಿಲ್ದಾಣದಿಂದ
ಮಣಿಪಾಲಕ್ಕೆ: ಬೆಳಿಗ್ಗೆ 10.45, 12.30 ಮತ್ತು ರಾತ್ರಿ 9.15.ಕ್ಕೆ ಹೊರಡಲಿದೆ ಎಂದು ಮಾಹಿತಿ ದೊರಕಿದೆ.
0 Comments