ಮೂಡುಬಿದಿರೆ ಠಾಣಾ ವ್ಯಾಪ್ತಿಯ ಪುತ್ತಿಗೆ ಆನಡ್ಕದ ಮಹಿಳೆ ತಂಗಿ (70) ಎಂಬವರು ನಾಪತ್ತೆಯಾಗಿದ್ದಾರೆ. ಇವರು ನ.5 ರಂದು ಬೆಳಿಗ್ಗೆ 8.30 ಕ್ಕೆ ಮನೆಯಿಂದ ಕೆಲಸಕ್ಕೆ ಹೋಗುತ್ತೇನೆ ಎಂದು ಹೋದವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅವರ ಮಗ ಅಣ್ಣಿ ನೀಡಿರುವ ದೂರಿನಂತೆ ಮೂಡುಬಿದಿರೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಾಪತ್ತೆಯಾದ ಮಹಿಳೆಯ ಚಹರೆ 5 ಅಡಿ ಎತ್ತರ, ಬಿಳಿ ಮಿಶ್ರಿತ ಕಪ್ಪು ಮಿಶ್ರಿತ ತಲೆ ಕೂದಲು, ಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ನೇರಳೆ ಬಣ್ಣದ ಸೀರೆಯನ್ನು ಧರಿಸಿರುತ್ತರೆ ಇವರ ಬಗ್ಗೆ ಮಾಹಿತಿ ದೊರಕಿತಲ್ಲಿ ಮಂಗಳೂರು ಪೊಲೀಸು ಆಯುಕ್ತರು-0824-2220801,2220800 ಮೂಡುಬಿದಿರೆ ಪೊಲೀಸು ಠಾಣೆ 08258-236333 ಸಂಪರ್ಕಿಸಬಹುದಾಗಿದೆ.
0 Comments