ಸಚಿವ ಕೋಟ ಚೇತರಿಕೆ: ಆಸ್ಪತ್ರೆಯಿಂದಲೇ ಅಧಿಕಾರಿಗಳ ಜೊತೆಗೆ ಆನ್‌ಲೈನ್ ಮೀಟಿಂಗ್

ಜಾಹೀರಾತು/Advertisment
ಜಾಹೀರಾತು/Advertisment

 

ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸರ್ಜರಿ ಮಾಡಿಸಿಕೊಂಡಿರುವ ಸಚಿವ ಶ್ರೀನಿವಾಸ ಪೂಜಾರಿ ಎರಡು ದಿನಗಳ ನಂತರ ಆಸ್ಪತ್ರೆಯಲ್ಲಿ ವರ್ಚುವಲ್ ಸಭೆ ಮೂಲಕ ಇಲಾಖಾಧಿಕಾರಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಿದ್ದಾರೆ. 

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ  ಕಲ್ಯಾಣ ಇಲಾಖೆಗೆ ಸಂಬಂಧಿಸಿದ  ಗಂಗಾ ಕಲ್ಯಾಣ ಅನುಷ್ಠಾನ, ವಿದ್ಯಾರ್ಥಿ ವೇತನ ಮಂಜೂರು , ವಿನಯ ಸಾಮರಸ್ಯ ಯೋಜನೆ ಸಹಿತ ವಿವಿಧ ವಿಷಯಗಳ ಕುರಿತು ಸಚಿವರು ಆಸ್ಪತ್ರೆಯಿಂದಲೇ  ತಮ್ಮ ಅಧಿಕಾರಿಗಳ ಜೊತೆಗೆ ವಿಡಿಯೋ ಸಂವಾದದಲ್ಲಿ ಭಾಗವಹಿಸಿದರು.

Post a Comment

0 Comments