ಮೂಡುಬಿದಿರೆ: ಬದುಕಿನಲ್ಲಿ ಜೀವನವೇ ಶಿಕ್ಷಣ. ಜೀವನದ ಪ್ರತಿ ಕ್ಷಣ ಕ್ಷಣದಲ್ಲೂ ನಾವು ವಿದ್ಯಾರ್ಥಿಗಳೇ ಆದ್ದರಿಂದ ಎಲ್ಲಾ ಗೊತ್ತಿದೆ ಎಂಬ ಅಹಂ ಬೇಡ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಂತಹ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡರೆ ಜೀವನಕ್ಕೆ ಸುಲಭವಾಗುತ್ತದೆ. ಇದರಿಂದ ಜೀವನದಲ್ಲಿ ಬರುವ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು.
ಅವರು ಮೂಡುಬಿದಿರೆ ಪಾಲಿಟೆಕ್ನಿಕ್ ವತಿಯಿಂದ ಶಿರ್ತಾಡಿಯ ಜವಾಹರ್ ಲಾಲ್ ನೆಹರು ಪ್ರೌಢಶಾಲೆ ಮಕ್ಕಿಯಲ್ಲಿ 7 ದಿನಗಳ ಕಾಲ ನಡೆದು ಮಂಗಳವಾರ ಮುಕ್ತಾಯಗೊಂಡ ಎನ್.ಎಸ್.ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಎಸ್.ಎನ್.ಎಂ ಪಾಲಿಟೆಕ್ನಿಕ್ ಆಡಳಿತ ಮಂಡಳಿ ಹಾಗೂ ಜವಾಹರ್ ವಿದ್ಯಾಸಂಘ ಶಿರ್ತಾಡಿಯ ಎಸ್.ಡಿ ಸಂಪತ್ ಸಾಮ್ರಾಜ್ಯ, ಅಧ್ಯಕ್ಷತೆ ವಹಿಸಿದ್ದರು.
ಸದಸ್ಯ ಸುಶಾಂತ್ ಸಾಮ್ರಾಜ್ಯ, ಮೂಡುಬಿದಿರೆ ಎಸ್.ಎನ್.ಎಂ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಜೆ.ಜೆ ಪಿಂಟೋ , ಮಹಾವೀರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ|ರಾಧಾಕೃಷ್ಣ ಶೆಟ್ಟಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಹರೀಶ್, ಶಿರ್ತಾಡಿ ಜವಾಹರ್ ವಿದ್ಯಾಸಂಘದ ಸದಸ್ಯ ಜಯಾನಂದ ಎನ್ ಶೆಟ್ಟಿ, ಎಸ್.ಎನ್.ಎಂ ಪಾಲಿಟೆಕ್ನಿಕ್‌ನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶರತ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಜಯರಾಮ್, ಎನ್.ಎಸ್.ಎಸ್ ಕಾರ್ಯ ನಿರ್ವಾಹಣಾಧಿಕಾರಿ, ರಾಮ್‌ಪ್ರಸಾದ್ ಎಂ., ವಿದ್ಯಾರ್ಥಿ ನಾಯಕರಾದ ಹೇಮಂತ್, ಸಾಯಿ ಪ್ರಣಾಮ್, ಮಾನಸ ಮತ್ತು ಸಿಂಧೂರ ಉಪಸ್ಥಿತರಿದ್ದರು.
ಯೋಜನಾಧಿಕಾರಿ ಗೋಪಾಲಕೃಷ್ಣ.ಕೆ ಎಸ್ ಸ್ವಾಗತಿಸಿದರು. ವಿದ್ಯಾರ್ಥಿನಿ ಧನುಶ್ರೀ ಕಾರ್ಯಕ್ರಮ ನಿರೂಪಿಸಿದರು. ಸಿಂಧೂರ ಭಟ್ ವಂದಿಸಿದರು.
0 Comments